
ಮಡಿಕೇರಿ ಅ.15 NEWS DESK : ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಅಂಗವಾಗಿ ಕೊಡಗಿನಾದ್ಯಂತ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅದರಂತೆ ಚೆಟ್ಟಳ್ಳಿಯಲ್ಲಿ ಮಹಿಳೆಯರ ಅವರ್ ಕ್ಲಬ್, ಸ್ಪೋಡ್ಸ್ ಕ್ಲಬ್, ವಿನಾಯಕ ರಿಕ್ರಿಏಷನ್ ಕ್ಲಬ್ ಹಾಗೂ ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಸ್ಪಚ್ಚತಾ ಕಾರ್ಯ ನಡೆಸಲಾಯಿತು. ರಸ್ತೆಯ ಎರಡು ಬದಿಗಳಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.









