
ಮಡಿಕೇರಿ ಅ.16 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ವಿಧಾನ ಸೌಧ ಕಚೇರಿಯಲ್ಲಿ ಪರಿಶಿಷ್ಟ ಪಂಗಡ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ವಿರಾಜಪೇಟೆ ಕ್ಷೇತ್ರದ ಪರಿಶಿಷ್ಟ ಪಂಗಡದ ಅಭಿವೃದ್ಧಿ ಮತ್ತು ಮೂಲಸೌಲಭ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಮುಖ ಬೇಡಿಕೆಗಳಾದ ಕೊಡಗು ಜಿಲ್ಲೆಯ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಾಗಿರುವ ಪರಿಶೀಷ್ಟ ಪಂಗಡದ ಜನಾಂಗದವರಿಗೆ ನಿವೇಶನಗಳನ್ನು ಒದಗಿಸಲು ಕಾಯ್ದಿರಿಸಿರುವ ಜಾಗದಲ್ಲಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ, ಕೊಡಗು ಜಿಲ್ಲೆಯ ತೆರಾಲು ಗ್ರಾಮದ 20.00ಎಕರೆ ಹಾಗೂ ಬಿರುನಾಣಿ ಗ್ರಾಮದ 7.00ಎಕರೆ ಬದಲಾಗಿ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಹೋಬಳಿ, ಬಿರುನಾಣಿ ಗ್ರಾಮದ ಸರ್ವೆ ನಂ:22/2ರಲ್ಲಿ 12.00ಹಾಗೂ 7.00 ಒಟ್ಟು 19.00ಎಕರೆ ವಿಸ್ತರ್ಣದ ಜಾಗದಲ್ಲಿ ಬಡಾವಣೆ ನಿರ್ಮಿಸಲು ತಿದ್ದುಪಡಿ ಆದೇಶ, ಕೊಡವ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಬಗ್ಗೆ ಸಂಬಂಧಿಸಿದ ಕಡತ ಸಂಖ್ಯೆ ಸಕಅ/74/ಎಸ್ಎಡಿ/2022 ಕಂಪ್ಯೂಟರ್ ನಂ. 731000, ಕೊಡಗು ಜಿಲ್ಲೆಯ ಕಾಫಿ ತೋಟಗಳ ಮಾಲೀಕರ ಲ್ಯೆನ್ ಮನೆಗಳಲ್ಲಿ 4757 ವಸತಿರಹಿತ ಮತ್ತು ನಿವೇಶನರಹಿತ ಪ.ಪಂಗಡದವರಿಗೆ ಮಾನ್ಯ ಮುಖ್ಯಮಂತ್ರಿಯವರ ಗ್ರಾಮೀಣ ನಿವೇಶನ ಯೋಜನೆಯಡಿ ಹಕ್ಕು ಪತ್ರ ನೀಡುವಂತೆ, ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳ ವ್ಯಾಪ್ತಿಯ ಗಿರಿಜನ ಹಾಡಿಗಳು /ಕಾಲೋನಿಗಳ ಜನಗಳಿಗೆ ಅನುಕೂಲವಾಗುವಂತೆ ಸಂಚಾರಿ ಆರೋಗ್ಯ ಘಟಕ ಸ್ಥಾಪಿಸುವ ಬಗ್ಗೆ. ( ಶ್ರೀ ಎ.ಎಸ್. ಪೊನ್ನಣ್ಣ, ಮಾನ್ಯ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ರವರ ಪತ್ರ.), ಪರಿಶಿಷ್ಟ ಪಂಗಡದ ಜನಾಂಗದವರಿಗೆ ಅರಣ್ಯ ಹಕ್ಕು ನೀಡುವ ಕುರಿತು, ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗೆ ಬಿಡುಗಡೆಯಾಗಿದ್ದ ಅನುದಾನವು ನಗದೀಕರಣವಾಗದಿರುವುದರಿಂದ ಸದರಿ ಬಾಬ್ತನ್ನು ಬಿಡುಗಡೆ ಮಾಡುವ ಬಗ್ಗೆ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪರಿಶಿಷ್ಟ ಪಂಗಡದ ಜನಾಂಗದ ಹಾಡಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಸಂಬಂಧ ಅನುದಾನ ಬಿಡುಗಡೆ ಮಾಡುವ ಬಗ್ಗೆ, ಕೊಡಗು ಜಿಲ್ಲೆಯ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಬಾಕಿ 2800 ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸಲು 100ಏಕರೆ ಜಾಗಾವನ್ನು ಗುರುತಿಸಿ ಕೊಡಗು ಐಟಿಡಿಪಿರವರಿಗೆ ಹೆಸರಿಗೆ ಹಸ್ತಾಂತರಿಸುವ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭ ಕೊಡಗು ಬುಡಕಟ್ಟು ಸಂಸೃತಿಯ ಜನಾಂಗವನ್ನು” ಅರೆಮನೆಪಾಲೆ “ಎಂದು ಮಾನ್ಯತೆ ದೊರಕಿಸಿಕೊಡುವ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕ್ಯೆಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿವರಾದ ರಂದೀಪ್ IAS-ನಿರ್ದೆಶಕರಾದ ಯೋಗೇಶ್ –ಉಪನಿರ್ದೆಶಕರು ಹಾಗೂ ಅಧಿಕಾರಿಗಳು ಹಾಜರಿದ್ದರು.









