
ವಿರಾಜಪೇಟೆ NEWS DESK ಅ.16 : ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರೆಜಿತ್ ಕುಮಾರ್ ಗುಹ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎ.ಎಸ್ ಮುಸ್ತಫ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2025-28 ನೇ ಸಾಲಿನ ಆಡಳಿತ ಮಂಡಳಿಗೆ ವಿರಾಜಪೇಟೆ ಪ್ರೆಸ್ ಕ್ಲಬ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಪುತ್ತಂ ಪ್ರದೀಪ್, ಖಜಾಂಚಿಯಾಗಿ ಹೇಮಂತ್ ಕುಮಾರ್ ಎಂ.ಎನ್, ನಿರ್ದೇಶಕರಾಗಿ ಕಿಶೋರ್ ಕುಮಾರ್ ಶೆಟ್ಟಿ, ಕೋಲತಂಡ ರಘು ಮಾಚಯ್ಯ ಆಯ್ಕೆಯಾದರು. ಈ ಸಂದರ್ಭ ಮಾತನಾಡಿದ ರೆಜಿತ್, ಎಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಜಿಮ್ಮಿ ಸಿಕ್ವೇರಾ, ಜಿಲ್ಲಾ ವೀಕ್ಷಕರಾದ ಎಂ.ಎನ್ ಚಂದ್ರಮೋಹನ್, ಪ್ರಮುಖರಾದ ನಾಗರಾಜ್ ಶೆಟ್ಟಿ, ಪಾರ್ಥ ಚಿಣ್ಣಪ್ಪ, ಡಿ. ಮಂಜುನಾಥ್, ಕಾಂಗಿರ ಬೋಪಣ್ಣ, ತೇಜಸ್ ಪಾಪಯ್ಯ, ಇಸ್ಮಾಯಿಲ್ ಕಂಡಕ್ಕರೆ, ಎ.ಎನ್ ವಾಸು, ನೌಫಲ್ ಕಡಂಗ, ಕೃಷ್ಣ, ಅಂತೋಣಿ ಹಾಜರಿದ್ದರು.









