ಮಡಿಕೇರಿ ಅ.18 NEWS DESK : ನಗರದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ವಿಜಯ ವಿನಾಯಕ ದೇವಾಲಯದ 27ನೇ ವಾರ್ಷಿಕೋತ್ಸವವು ಅ.23 ಮತ್ತು 24 ರಂದು ನಡೆಯಲಿದೆ. ಅ.23ರ ಸಂಜೆಯಿಂದ ಆರಂಭಗೊಳ್ಳುವ ಪೂಜಾ ವಿಧಿವಿಧಾನಗಳು ಅ.24ರ ಮಧ್ಯಾಹ್ನ ಮಹಾಮಂಗಳಾರತಿಯೊಂದಿಗೆ ಪೂರ್ಣಗೊಳ್ಳಲಿದೆ. ಆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.











