
ಮಡಿಕೇರಿ ಅ.21 NEWS DESK : ನಗರದ ಶ್ರೀ ಓಂಕಾರೇಶ್ವರ ದೇವಾಲಯ ವತಿಯಿಂದ ಕಾರ್ತಿಕ ಮಾಸದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಉತ್ಸವಾದಿಗಳು ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಅವರು ತಿಳಿಸಿದ್ದಾರೆ. ಅ.22 ರಂದು ಸಂಜೆ 6 ಗಂಟೆಗೆ ಗೋಪೂಜೆ ನಡೆಯಲಿದೆ. ಅಕ್ಟೋಬರ್ 22 ರಿಂದ ನವೆಂಬರ್ 2 ರವರೆಗೆ 12 ದಿನಗಳ ಕಾಲ ಸಂಜೆ 6.30 ಗಂಟೆಯಿಂದ ತುಳಸಿ ಪೂಜೆ ನಡೆಯಲಿದ್ದು, ತುಳಸಿ ಪೂಜೆ ಮಾಡಿಸ ಬಯಸುವ ಭಕ್ತಾಧಿಗಳು 100 ಸೇವಾ ದರ ಪಾವತಿಸಿ, ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರವಾಗಿಬೇಕಾಗಿ ಕೋರಿದ್ದಾರೆ. ನವೆಂಬರ್ 2 ರಂದು ಬೆಳಗ್ಗೆ 10.30 ಗಂಟೆಗೆ ತುಳಸಿ ಕಲ್ಪೋಕ ಪೂಜೆ ನಡೆಯಲಿದೆ. ಹಾಗೆಯೇ ನವೆಂಬರ್ 5 ರಂದು ಸಂಜೆ 6 ಗಂಟೆಗೆ ಮಹಾಪೂಜೆ ನಡೆಯಲಿದೆ. ಜೊತೆಗೆ ಸಂಜೆ 6.30 ಗಂಟೆಗೆ ತೆಪ್ಪೋತ್ಸವ, ದಟ್ಟೋತ್ಸವ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಕಾರ್ತಿಕ ಹುಣ್ಣಿಮೆಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾ ಪೂಜೆ (6 ಗಂಟೆಯ) ಯ ನಂತರ ಸಂಜೆ 6:30 ಗಂಟೆಗೆ ದೇವಸ್ಥಾನದ ವತಿಯಿಂದ ತೆಪ್ಪೋತ್ಸವ ನಡೆಯಲಿದ್ದು, ತೆಪ್ಪೋತ್ಸವಕ್ಕೆ ಸೇವೆ ನೀಡಲು ಬಯಸುವ ಭಕ್ತರು ರೂ.10 ಸಾವಿರ ಸೇವಾ ದರ ಪಾವತಿಸಿ ಸಂಕಲ್ಪ ಮಾಡಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ 9448899567 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಚುಮ್ಮಿ ದೇವಯ್ಯ ಅವರು ತಿಳಿಸಿದ್ದಾರೆ.








