
ನಾಪೋಕ್ಲುಅ.24 NEWS DESK : ಚೆಡಾವು ಆದರ್ಶ್ ಫ್ರೆಂಡ್ಸ್ ವತಿಯಿಂದ 13ನೇ ಗೋ ಪೂಜೆ ನಡೆಯಿತು. ಚೆಡಾವುನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಗ್ಮಿ ವಿಕ್ರಂತ್ ದೇಲಂಪಡಿ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭ ಮಾತೆಯರು ಗೋವಿಗೆ ಪೂಜೆಯನ್ನು ಸಲ್ಲಿಸಿದರು. ಸಂಘದ ಅಧ್ಯಕ್ಷರಾದ ಸುನಿಲ್ ಸಂಪಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಾ ದೇವಿ ಬಾಲಚಂದ್ರ ಕಳಗಿ ಹಾಗೂ ಆದರ್ಶ್ ಫ್ರೆಂಡ್ಸ್ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಿಳಾ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









