ಮಡಿಕೇರಿ ಅ.24 NEWS DESK : ಭಾಗಮಂಡಲದ ಜಾನ್ ಡಾನ್ಸ್ ಗ್ಯಾಲರಿ ನೃತ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ನವೆಂಬರ್‌ನಲ್ಲಿ ಪಾಂಡಿಚೆರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನವನ್ನು ನೀಡಲಿದ್ದಾರೆ. ಸಂಸ್ಥೆಯ ಗಾನವಿ, ಧೃತಿ, ತ್ರೈಸಿ ಹೆಚ್ಆರ್, ಅನುಪಮಾ, ನೀಕ್ಷಾ, ಸಾನ್ವಿ ಜಿ, ದರ್ಶಿನಿ, ಯುಕ್ತ, ಹರ್ಷಿಕ, ಪವಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಾಗಮಂಡಲದ ನೃತ್ಯ ತರಬೇತಿ ಸಂಸ್ಥೆ ಹಾಗೂ ಕರಾಟೆ ತರಬೇತಿಯ ನಿರ್ದೇಶಕ ನಾಗರಾಜ್, ನೃತ್ಯ ತರಬೇತಿಯ ಮುಖ್ಯ ತರಬೇತಿದಾರಾಗಿ ಅಂತರಾಷ್ಟ್ರೀಯ ನೃತ್ಯಪಟು ಪೃಥ್ವಿ ನಾಯಕ್ ಹಾಗೂ ಸಹ ತರಬೇತಿದಾರರಾಗಿ ಬೃಂದಾಕವನ್, ಕರಾಟೆ ತರಬೇತುದಾರರಾಗಿ ರಾಷ್ಟ್ರೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ರೆಫ್ರಿ ಇಮ್ಯಾನ್ವಲ್ ಹಾಗೂ ರಾಯ್ ಜೋಸೆಫ್ ತರಬೇತಿ ನೀಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಲು ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿದ್ದು, ಆಸಕ್ತರು ಕರಾಟೆ ಹಾಗೂ ನೃತ್ಯ ತರಬೇತಿಗಾಗಿ Contact No 9207566495, PLACE: VSSN Hall Bhagamandala ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ತರಬೇತಿದಾರರು ತಿಳಿಸಿದ್ದಾರೆ.











