
ಮಡಿಕೇರಿ ಅ.27 NEWS DESK : ಕೋಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಿಂದ ಬೀರು (ಗಾಡ್ರೇಜ್) ಹಾಗೂ ಚೇರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಗ್ರಾಮದ ದಾನಿಗಳಾದ ಪೊನ್ನಚಂಡ ಭೀಮಯ್ಯ ಅವರು ಶಾಲೆಯ ದಾಖಲಾತಿಗಳನ್ನು ಇಡಲು ಉತ್ತಮವಾದ ಬೀರು (ಗಾಡ್ರೇಜ್) ಹಾಗೂ ಗ್ರಾಮದ ಮತ್ತೋರ್ವ ದಾನಿಗಳಾದ ಚೆರಿಯಪಂಡ ಕೆ.ಪೊನ್ನಪ್ಪ ಶಾಲೆಯ ಉಪಯೋಗಕ್ಕಾಗಿ 10 ಚೇರ್‌ಗಳನ್ನು ಕೊಡುಗೆಯಾಗಿ ನೀಡಿದರು. ದಾನಿಗಳ ಉದಾರ ಸೇವೆಗೆ ಶಾಲೆಯ ಮುಖ್ಯ ಶಿಕ್ಷಕರು, ಎಸ್ ಡಿಎಂಸಿ ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.









