Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ-ಸೋಮವಾರಪೇಟೆ : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಯ ಆಯ್ಕೆಪಟ್ಟಿ ಪ್ರಕಟ*
  • *ಮಡಿಕೇರಿ : ಜೂ.20 ರಂದು ನೇರ ಸಂದರ್ಶನ*
  • *ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿಸಿ : ಶಶಿಧರ್*
  • *ಮರಾಠ-ಮರಾಟಿ ಸಮಾಜ ಸೇವಾ ಸಂಘದ 30ನೇ ವಾರ್ಷಿಕೋತ್ಸವ : ಸಭಾಭವನ ಕಾಮಗಾರಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ : ಎಂ.ಎಂ.ಪರಮೇಶ್ವರ್*
  • *ಮಡಿಕೇರಿಯಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಜಾಥಾ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಡಾ.ಜಿ.ಶೈಲಜಾ*
  • *ಮತದಾರರ ಪಟ್ಟಿಯಿಂದ ಅರ್ಹರು ಬಿಟ್ಟು ಹೋಗದಂತೆ ಎಚ್ಚರ ವಹಿಸಿ: ತಹಶೀಲ್ದಾರ್ ಶ್ರೀಧರ*
  • *ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾದ ಸಂಸದ ಯದುವೀರ್ ಒಡೆಯರ್ : ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹಾಗೂ ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ ವನ ಯೋಜನೆ ಜಾರಿಗೆ ಮನವಿ*
  • *ಮೂರ್ನಾಡು : ಜೂ.16 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಮಂತರ್ ಗೌಡ : ಕೊಡಗು ಅಭಿವೃದ್ಧಿ ಕುರಿತು ಚರ್ಚೆ*
  • *ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ : ಪರಿಶೀಲನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರದ್ಧಾಂಜಲಿಗಾಗಿ ಕಾಯುತ್ತಿರುವ ಶ್ರದ್ಧಾಂಜಲಿ ವಾಹನ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರದ್ಧಾಂಜಲಿಗಾಗಿ ಕಾಯುತ್ತಿರುವ ಶ್ರದ್ಧಾಂಜಲಿ ವಾಹನ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*

ಅಕ್ಟೋಬರ್ 27, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.27 NEWS DESK : ಮೃತದೇಹಗಳನ್ನು ಉಚಿತವಾಗಿ ಕೊಂಡೊಯ್ಯಲು ಬಡವರಿಗೆ ಅನುಕೂಲವಾಗಲಿ ಎಂದು ಸರಕಾರ ಕೊಡಗು ಜಿಲ್ಲೆಗೆ ನೀಡಿದ್ದ ‘ಶ್ರದ್ಧಾಂಜಲಿ’ ವಾಹನ ಇದೀಗ ಸ್ವತ: ಶ್ರದ್ಧಾಂಜಲಿಗಾಗಿ ಕಾಯುತ್ತಿರುವ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆಂಬ್ಯುಲೆನ್ಸ್ ಗಳಿಗೆ ಹಣ ನೀಡಿ ಶವಗಳನ್ನು ಸ್ಥಳಾಂತರಿಸಲು ಸಾಧ್ಯವಾಗದ ಬಡವರ ಉಚಿತ ಸೇವೆಗಾಗಿ 2018 ರಲ್ಲಿ ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಆರೋಗ್ಯ ಇಲಾಖೆ ಮೂಲಕ ‘ಶ್ರದ್ಧಾಂಜಲಿ’ ವಾಹನವನ್ನು ನೀಡಲಾಯಿತು. ಈ ಯೋಜನೆಯಡಿ ಕೊಡಗು ಜಿಲ್ಲೆಗೂ ವಾಹನ ಬಂದಿದ್ದು, ಈಗಾಗಲೇ ಏಳು ವರ್ಷಗಳನ್ನು ಪೂರೈಸಿದೆ. ಆದರೆ ‘ಶ್ರದ್ಧಾಂಜಲಿ’ ವಾಹನದ ಸ್ಥಿತಿ ಆ ಸರಕಾರಕ್ಕೇ ಪ್ರೀತಿ ಎನ್ನುವಂತ್ತಿದೆ ಎಂದು ಟೀಕಿಸಿದ್ದಾರೆ. ಶ್ರದ್ಧಾಂಜಲಿ ವಾಹನ ದುರಸ್ತಿಗೀಡಾಗಿ ಮಂಗಳೂರು ವರ್ಕ್‍ಶಾಪ್ ಸೇರಿ ಹಲವು ದಿನಗಳೇ ಕಳೆದಿದೆ. ಜಿಲ್ಲಾಸ್ಪತ್ರೆಗೆ ಬರುವ ಬಡವರು ಮೃತದೇಹಗಳನ್ನು ಸ್ಥಳಾಂತರಿಸಲು ಆಂಬ್ಯುಲೆನ್ಸ್ ಗಳಿಗೆ ದುಬಾರಿ ಹಣ ನೀಡಲು ಸಾಧ್ಯವಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಗೋಣಿಕೊಪ್ಪದ ಬಡ ಕುಟುಂಬವೊಂದು ತಮ್ಮ ಮಗುವಿನ ಮೃತದೇಹವನ್ನು ಕೊಂಡೊಯ್ಯಲು ಪರದಾಡಿದ ಉದಾಹರಣೆ ಇದೆ. ಮಡಿಕೇರಿಯ ಜಿಲ್ಲಾಸ್ಪತ್ರೆಗೆ 2018 ರಲ್ಲಿ ಹಾಸನ ಜಿಲ್ಲೆಯ 108 ವಾಹನವನ್ನು ‘ಶ್ರದ್ಧಾಂಜಲಿ’ ವಾಹನವನ್ನಾಗಿ ಪರಿವರ್ತಿಸಿ ನೀಡಲಾಗಿದೆ. ಇದು 2014 ರಲ್ಲಿ ಖರೀದಿಸಿದ ವಾಹನವಾಗಿದ್ದು, ಬಹುತೇಕ ಸಂಚಾರದ ಗುಣಮಟ್ಟವನ್ನು ಕಳೆದುಕೊಂಡಿದೆ. ಬೆಟ್ಟಗುಡ್ಡಗಳಿಂದ ಕೂಡಿರುವ ಮಳೆ ಪ್ರದೇಶ ಕೊಡಗು ಜಿಲ್ಲೆಗೆ ಈ ರೀತಿಯ ಯೋಗ್ಯವಲ್ಲದ ವಾಹನವನ್ನು ನೀಡಿರುವುದು ಸರಿಯಾದ ಕ್ರಮವಲ್ಲ. ಇದೀಗ ‘ಶ್ರದ್ಧಾಂಜಲಿ’ ವಾಹನ ಹೀನಾಯ ಸ್ಥಿತಿಯಲ್ಲಿದ್ದು, ತಾತ್ಕಾಲಿಕ ದುರಸ್ತಿಯಿಂದ ಯಾವುದೇ ಪ್ರಯೋಜವಿಲ್ಲ ಎಂದು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಪ್ರತಿ ಬಜೆಟ್ ನಲ್ಲೂ ಕೊಡಗು ಜಿಲ್ಲೆಯ ಆಸ್ಪತ್ರೆಗಳ ಉನ್ನತೀಕರಣ ಬಗ್ಗೆ ಭರವಸೆ ನೀಡುತ್ತಿದೆ. ಆದರೆ ಕನಿಷ್ಠ ಬಡವರಿಗಾಗಿ ನೂತನ ‘ಶ್ರದ್ಧಾಂಜಲಿ’ ವಾಹನವನ್ನು ನೀಡಲಾಗದ ದುಸ್ಥಿತಿಯಲ್ಲಿ ಸರಕಾರವಿದೆ ಎಂದು ತೇಲಪಂಡ ಶಿವಕುಮಾರ್ ನಾಣಯ್ಯ ಆರೋಪಿಸಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತಕ್ಷಣ ನೂತನ ವಾಹನದ ವ್ಯವಸ್ಥೆಯನ್ನು ಮಾಡಬೇಕು ಎಂದು ಒತ್ತಾಯಿಸಿರುವ ಅವರು, ಈ ಬೇಡಿಕೆಯ ಕುರಿತು ನಿರ್ಲಕ್ಷ್ಯ ವಹಿಸಿದರೆ ಬಡವರ ಪರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

   

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ-ಸೋಮವಾರಪೇಟೆ : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಯ ಆಯ್ಕೆಪಟ್ಟಿ ಪ್ರಕಟ*

ಜೂನ್ 16, 2026

*ಮಡಿಕೇರಿ : ಜೂ.20 ರಂದು ನೇರ ಸಂದರ್ಶನ*

ಜೂನ್ 16, 2026

*ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿಸಿ : ಶಶಿಧರ್*

ಜೂನ್ 16, 2026

*ಮಡಿಕೇರಿ : ಜೂ.20 ರಂದು ನೇರ ಸಂದರ್ಶನ*

ಜೂನ್ 16, 2026 ಇತ್ತೀಚಿನ ಸುದ್ದಿಗಳು ಉದ್ಯೋಗ ಭಾಗ್ಯ ಕೊಡಗು ಜಿಲ್ಲೆ

ಮಡಿಕೇರಿ ಜೂ.16 NEWS DESK : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ, ಕೊಡಗು ಜಿಲ್ಲೆ, ಇವರ ವತಿಯಿಂದ ಜೂನ್,…

*ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿಸಿ : ಶಶಿಧರ್*

ಜೂನ್ 16, 2026

*ಮರಾಠ-ಮರಾಟಿ ಸಮಾಜ ಸೇವಾ ಸಂಘದ 30ನೇ ವಾರ್ಷಿಕೋತ್ಸವ : ಸಭಾಭವನ ಕಾಮಗಾರಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ : ಎಂ.ಎಂ.ಪರಮೇಶ್ವರ್*

ಜೂನ್ 16, 2026

*ಮಡಿಕೇರಿಯಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಜಾಥಾ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಡಾ.ಜಿ.ಶೈಲಜಾ*

ಜೂನ್ 16, 2026

*ಮತದಾರರ ಪಟ್ಟಿಯಿಂದ ಅರ್ಹರು ಬಿಟ್ಟು ಹೋಗದಂತೆ ಎಚ್ಚರ ವಹಿಸಿ: ತಹಶೀಲ್ದಾರ್ ಶ್ರೀಧರ*

ಜೂನ್ 16, 2026

*ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾದ ಸಂಸದ ಯದುವೀರ್ ಒಡೆಯರ್ : ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹಾಗೂ ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ ವನ ಯೋಜನೆ ಜಾರಿಗೆ ಮನವಿ*

ಜೂನ್ 16, 2026

*ಮೂರ್ನಾಡು : ಜೂ.16 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಜೂನ್ 15, 2026

*ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಮಂತರ್ ಗೌಡ : ಕೊಡಗು ಅಭಿವೃದ್ಧಿ ಕುರಿತು ಚರ್ಚೆ*

ಜೂನ್ 15, 2026

*ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ : ಪರಿಶೀಲನೆ*

ಜೂನ್ 15, 2026

*ವಿ.ಬಾಡಗ ಗ್ರಾಮದಲ್ಲಿ ಕ್ರೀಡಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣ : ರೂ.45 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ : ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.