
ಗೋಣಿಕೊಪ್ಪ ನ.1 NEWS DESK : ಗೋಣಿಕೊಪ್ಪ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದ ಅವರು, ಈ ನಾಡು ಭಾಷೆ ಸಂಸ್ಕೃತಿ, ಸಾಹಿತ್ಯ, ಆಚಾರ, ವಿಚಾರ, ಪದ್ಧತಿ, ಪರಂಪರೆಗಳಿಂದ ಸಮೃದ್ಧಿಗೊಂಡಿದೆ. ಕವಿಗಳು, ಸಾಹಿತಿಗಳು, ಕಲಾವಿದರು, ಸೇರಿದಂತೆ ಕನ್ನಡಪರ ಹೋರಾಟದ ಧ್ವನಿಗಳಿಂದ ಈ ನಾಡು ಕಟ್ಟಲಾಗಿದೆ. ರಾಜರ ಕಾಲದ ಆಳ್ವಿಕೆಯಿಂದ ಈ ನಾಡು ಬಹುದೊಡ್ಡ ವಿಸ್ತರತೆಯಲ್ಲಿ ಗುರುತಿಸಿಕೊಂಡಿತು. ನಂತರ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಇಲ್ಲಿನ ಧರ್ಮ, ಜಾತಿ, ಭಾಷೆ, ಜನಾಂಗಗಳ ಒಗ್ಗೂಡುವಿಕೆ ಸಾಧ್ಯವಾಯಿತು ಎಂದು ಹೇಳಿದರು. ವಿದ್ಯಾರ್ಥಿಗಳು ಈ ನಾಡಿನ ಪರಂಪರೆ, ಇತಿಹಾಸ, ಹೋರಾಟ ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಂಡು ಕನ್ನಡತನವನ್ನು ಎತ್ತಿ ಹಿಡಿಯಬೇಕು. ಕನ್ನಡದ ಅಭಿಮಾನವನ್ನು ವೃದ್ಧಿಗೊಳಿಸುತ್ತಾ ಈ ನಾಡಿಗಾಗಿ ಶ್ರಮಿಸಬೇಕು. ಈ ನಾಡಿನ ಕೀರ್ತಿಯನ್ನು ಬೆಳಗಿಸಬೇಕು ಎಂದು ಸಲಹೆ ನೀಡಿದರು. ಶಾಲೆಯ ಸಹ ಶಿಕ್ಷಕ ಸಿದ್ದರಾಜು ಮಾತನಾಡಿ, ಕಾವೇರಿಯಿಂದ ಗೋದಾವರಿವರೆಗೆ ಹರಡಿಕೊಂಡ ಕನ್ನಡ ನಾಡು, ತನ್ನದೇ ಆದ ವಿಶಿಷ್ಟತೆಗಳಿಂದ ಗುರುತಿಸಿಕೊಂಡಿದೆ. ಕನ್ನಡ ಭಾಷೆ ಹೃದಯದಿಂದ ಮಿಡಿಯುವ ಶಬ್ದಗಳಿಂದ ಕೂಡಿವೆ. ಹೀಗಾಗಿಯೇ ಪಂಪ, ರನ್ನ, ಕುವೆಂಪು, ಬೇಂದ್ರೆಯಂತಹ ಕವಿಗಳು ಕನ್ನಡ ಭಾಷೆ ಕೇವಲ ನುಡಿಯುವ ಭಾμÉಯಲ್ಲ ಹೃದಯ ಮಿಡಿಯುವ ಭಾಷೆಯಾಗಿದೆ ಎಂದು ಶ್ಲಾಘಿಸಿದ್ದಾರೆ. ಮೈಸೂರು ನರಸಿಂಹಸ್ವಾಮಿಯವರು ಕನ್ನಡವನ್ನು ಮಲ್ಲಿಗೆ ಹೂವಿಗೆ ಹೋಲಿಸುವ ಮೂಲಕ ಕನ್ನಡದ ಶ್ರೇಷ್ಠತೆಯನ್ನು ಕೊಂಡಾಡಿದ್ದಾರೆ ಇಂತಹ ವಿಚಾರಗಳನ್ನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳು ಕನ್ನಡ ನಾಡಿನ ಹೋರಾಟ ಮತ್ತು, ಭಾಷೆ ಸಂಸ್ಕೃತಿಗಳ ಬಗ್ಗೆ ಭಾಷಣ ಮಾಡಿದರು. ಕನ್ನಡ ಗೀತೆಗಳು ಹಾಡುವ ಮೂಲಕ ಕನ್ನಡ ಅಭಿಮಾನವನ್ನು ಎತ್ತಿ ಹಿಡಿದರು. ಹಾಡುಗಾರಿಕೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಮೇಲು ಉಸ್ತುವಾರಿ ಸಮಿತಿ ಉಪಾಧ್ಯಕ್ಷೆ ದಿವ್ಯ ಪ್ರೋತ್ಸಾಹಕರ ಬಹುಮಾನಗಳನ್ನ ನೀಡಿದರು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ ಕುಮಾರ್, ಶಾಲೆಯ ಮೇಲೂ ಉಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ದಿವ್ಯ, ಮತ್ತು ಸದಸ್ಯರುಗಳು, ಶಾಲೆಯ ಶಿಕ್ಷಕರುಗಳಾದ, ದಮಯಂತಿ ಎ.ಎನ್, ಅನೀತಾ ಕುಮಾರಿ, ಜೋಸ್ಲಿಯಾ ಎಂ.ಟಿ, ಜಯಶ್ರೀ ಎನ್.ಕೆ, ಎಂಸಿ ಇಂದಿರ, ಶಾರದ, ಸ್ನೇಹ ಕಾವೇರಮ್ಮ, ನಾಗರಾಜು, ಸಿದ್ದರಾಜು, ಮಂಜುಳಾ, ಸುನಿತ, ಪತ್ರಕರ್ತ, ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಸತೀಶ್, ನಿವೃತ ಶಿಕ್ಷಕರುಗಳಾದ ನಿರ್ಮಲ, ತ್ರಿವೇಣಿ ಇದ್ದರು.









