
ಮಡಿಕೇರಿ ನ.1 NEWS DESK : ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಚಾಂಪಿಯನ್ಸ್ ಟ್ರೋಫಿ-2025 ಸೀಸನ್ 1 ಕ್ರಿಕೆಟ್ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಮೂರ್ನಾಡಿನ ಶ್ರೀ ಬಾಚಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಈ ಪಂದ್ಯಾವಳಿಗೆ ಶುಭ ಕೋರಿದ ಶಾಸಕರು, ಕ್ರೀಡೆಯು ಕೊಡಗಿನ ಜನತೆಯ ಉಸಿರಿನಲ್ಲಿ ಹಾಸುಹೊಕ್ಕಿದೆ. ಇಂತಹ ಕ್ರೀಡಾಕೂಟಗಳು ಕ್ರೀಡಾ ಪ್ರತಿಭೆಯನ್ನು ಸಮಾಜದ ಮುನ್ನೆಲೆಗೆ ತರಲು ಅತ್ಯಂತ ಸಹಕಾರಿಯಾಗಲಿದೆ. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟವಾಡಿ, ತಮ್ಮ ಸಾಮರ್ಥ್ಯ ಪ್ರದರ್ಶಿಸುವುದರೊಂದಿಗೆ ಜೀವನದಲ್ಲಿ ಯಶಸ್ಸು ಕಾಣಲು ಮುನ್ನುಡಿ ಬರೆಯಬೇಕೆಂದು ಕರೆ ನೀಡಿದರು. ಕ್ರೀಡೆಯನ್ನು ಕ್ರೀಡಾ ಸ್ಪೂರ್ತಿಯಿಂದ ಆಸ್ವಾದಿಸುತ್ತಾ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶಕ್ಕೆ ನಾಂದಿ ಹಾಡಬೇಕೆಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ಅಧ್ಯಕ್ಷ ಕೆ.ಕುಶಾಲಪ್ಪ, ಉಪಾಧ್ಯಕ್ಷ ದಾಮೋದರ್, ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್, ಖಜಾಂಚಿ ಗಿರೀಶ್, ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ರೈ, ಪ್ರಮುಖರಾದ ಕೆ.ಆರ್.ರಮೇಶ್, ಕೆ.ಡಿ.ಶಂತಕುಮಾರ್, ದೇವಯ್ಯ ಹೆಮ್ಮಡು, ಚಿನ್ನಪ್ಪ, ಎಂ.ಡಿ.ನಾಣಯ್ಯ, ತಮ್ಮಯ್ಯ ಹೊದ್ದೂರು, ಹರೀಶ್ ಮಡಿಕೇರಿ ಪದಾಧಿಕಾರಿಗಳು ಹಾಗೂ ಸಮುದಾಯದ ಭಾಂದವರು ಉಪಸ್ಥಿತರಿದ್ದರು.









