
ವಿರಾಜಪೇಟೆ ನ.3 NEWS DESK : ಬಳಕೆದಾರರ ಮತ್ತು ಗುತ್ತಿಗೆದಾರರ ಸಮ್ಮೇಳನ ವಿರಾಜಪೇಟೆಯ ಸ್ಪೀಂಗ್ ಫೀಲ್ಡ್ ರೆಸಾರ್ಟ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಮಾಜಿ ಯೋಧ ಸಲಾಂ ಅಬ್ದುಲ್ಲ ಕಡಂಗ ವಹಿಸಿದ್ದರು. ಎ.ಸಿ.ಸಿ.ಸಿಮೆಂಟ್ ಸಂಸ್ಥೆಯ ರಾಜ್ಯ ನಿರ್ದೇಶಕರಾದ ಜೀವನ್ ಅವರು ಮಾತನಾಡಿ, ನಮ್ಮ ಸಂಸ್ಥೆಯು 1936 ನೇ ಇಸವಿಯಲ್ಲಿ ಆರಂಭಗೊಂಡಿತು. ಸ್ವತಂತ್ರ ಪೂರ್ವದಲ್ಲಿ ನಮ್ಮ ಸಂಸ್ಥೆಯು ಆರಂಭ ಗೊಂಡಿತು. 1984 ರಿಂದ ಹೊರದೇಶದ ಕಂಪನಿಗಳು ನಡೆಸುತ್ತಿದ್ದವು, ನಂತರ 2022 ರಲ್ಲಿ ಅಂಬಾನಿ ಅದಾನಿ ಕಂಪನಿಯು ಮರಳಿ ಪಡೆಯಲು ಯಶಸ್ವಿಯಾಯಿತು. ಮೊದಲು 50 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನೆ ಮಾಡುತ್ತಿತ್ತು. ಪ್ರಸ್ತುತ ನೂತನ ಆಡಳಿತ ಮಂಡಳಿಯ ರಚನೆಯಾದ ನಂತರ 110 ಮಿಲಿಯನ್ ಡನ್ ಸಿಮೆಂಟ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಎಸಿಸಿ ಸಿಮೆಂಟ್ ನಲ್ಲಿ ಯಾವುದೇ ಕಲಬೆರಕೆ ಇಲ್ಲ. ಅಂಬುಜ ಎಂಬ ಸಿಮೆಂಟ್ ಕೂಡ ನಮ್ಮ ಸಂಸ್ಥೆಯೆ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು. ಈ ಬಾರಿ ಅತಿ ಹೆಚ್ಚು ಸಿಮೆಂಟ್ ಖರೀದಿ ಮಾಡಿದ ಸದಸ್ಯರಿಗೆ ಸಿಲ್ವರ್ ನಾಣ್ಯಗಳನ್ನು ನೀಡಲಾಯಿತು. ವಿರಾಜಪೇಟೆಯ ಎನ್ ಟಿ.ಆರ್.ರಮೇಶ್, ಅಂದಾಯಿ ಕೊಂಡಂಗೇರಿ, ರಜಾಕ್ ಕಡಂಗ, ಕುಟ್ಟಂಡ ಪೆಮ್ಮಯ್ಯ ಪಡೆದು ಕೊಂಡರು.
ಸಿಲ್ವರ್ ನಾಣ್ಯಗಳನ್ನು ಪಡೆದ ಸದಸ್ಯರಿಗೆ ಕಾರ್ಯಕ್ರಮದ ಆಯೋಜಕರಾದ ಸಲಾಂ ಅವರು ಶುಭಾಶಯ ಸಲ್ಲಿಸಿದರು. ಸಂಸ್ಥೆಯ ಪ್ರಶಾಂತ ಹಾಗೂ ಸತ್ಯ ಆಗಮಿಸಿದ್ದರು. ನೂರಾರು ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









