Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಸೈನಿಕಶಾಲೆ ಸೇಪ೯ಡೆ ತರಬೇತಿ ಕಾಯಾ೯ಗಾರ ಉದ್ಘಾಟನೆ : ಸೈನಿಕ ಶಾಲೆ ಶಿಸ್ತು, ದೇಶಭಕ್ತಿ, ನಾಯಕತ್ವ ಮತ್ತು ನಂಬಿಕೆಯ ಪಾಠಗಳನ್ನು ಕಲಿಸುವ ಪುಣ್ಯಸ್ಥಳ : ಅಂಬೆಕಲ್ ಜೀವನ್ ಕುಶಾಲಪ್ಪ*
ಇತ್ತೀಚಿನ ಸುದ್ದಿಗಳು

*ಸೈನಿಕಶಾಲೆ ಸೇಪ೯ಡೆ ತರಬೇತಿ ಕಾಯಾ೯ಗಾರ ಉದ್ಘಾಟನೆ : ಸೈನಿಕ ಶಾಲೆ ಶಿಸ್ತು, ದೇಶಭಕ್ತಿ, ನಾಯಕತ್ವ ಮತ್ತು ನಂಬಿಕೆಯ ಪಾಠಗಳನ್ನು ಕಲಿಸುವ ಪುಣ್ಯಸ್ಥಳ : ಅಂಬೆಕಲ್ ಜೀವನ್ ಕುಶಾಲಪ್ಪ*

November 3, 20252 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ನ.3 NEWS DESK : ರೋಟರಿ ಮಿಸ್ಟಿ ಹಿಲ್ಸ್ ಮತ್ತು ವಿವೇಕಾನಂದ ಯೂತ್ ಮೂವ್ ಮೆಂಟ್  ವತಿಯಿಂದ ಸೈನಿಕಶಾಲೆ ಸೇರಲಿಚ್ಚಿಸುವ ವಿದ್ಯಾಥಿ೯ಗಳಿಗೆ ಶೈಕ್ಷಣಿಕ ತರಬೇತಿ ಕಾಯಾ೯ಗಾರಕ್ಕೆ ಚಾಲನೆ ದೊರೆಯಿತು. ನಗರದ ಶಿಶುಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ ತರಬೇತಿ ಕಾಯಾ೯ಗಾರವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ, ಸೈನಿಕ ಶಾಲೆ ಎಂಬುದು ಕೇವಲ ಶಿಕ್ಷಣದ ಕೇಂದ್ರವಲ್ಲ ಅದು ಶಿಸ್ತು, ದೇಶಭಕ್ತಿ, ನಾಯಕತ್ವ ಮತ್ತು ನಂಬಿಕೆಯ ಪಾಠಗಳನ್ನು ಕಲಿಸುವ ಪುಣ್ಯಸ್ಥಳ.  ಸೈನಿಕಶಾಲೆಯಲ್ಲಿ  ಕಲಿಯುವ ಮಕ್ಕಳು ನಾಳೆಯ ಭಾರತದ ಭದ್ರ ಕೈಗಳು, ದೇಶದ ಹೆಮ್ಮೆಯಾಗಿದ್ದಾರೆ ಎಂದು ಶ್ಲಾಘಿಸಿದರು. ಈ ಶಿಬಿರ ಕೇವಲ ಪರೀಕ್ಷೆಗೆ ತಯಾರಿ ಮಾತ್ರವಲ್ಲ  ಇದು ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುವ ವೇದಿಕೆ. ನಮ್ಮ ದೇಶದ ಶಕ್ತಿ, ದೇಶ ಸೇವೆ ಮಾಡಲು ಕನಸು ಕಾಣುವ   ಯುವಕ , ಯುವತಿಯರಲ್ಲಿದೆ ಎಂದೂ ಜೀವನ್ ಅಭಿಪ್ರಾಯಪಟ್ಟರು. ಸೈನಿಕ ಶಾಲೆಗೆ ಸೇರಲು ಇಚ್ಛೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ  ಕಾಯಾ೯ಗಾರದ ಮೂಲಕ ಮಹತ್ವದ ಹೆಜ್ಜೆ ಹಾಕಿದ್ದೀರಿ.  ಸೈನಿಕಶಾಲೆಗೆ ಸೇಪ೯ಡೆಯಾಗುವ ವಿದ್ಯಾಥಿ೯ಗಳ  ಕನಸಿಗೆ ಶ್ರಮ ಮತ್ತು ಸಮಯ ನೀಡುತ್ತಿರುವುದು ಪ್ರಶಂಸನೀಯ.  ಇಂಥ ಕಾರ್ಯಾಗಾರವನ್ನು ಆಯೋಜಿಸಿರುವ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌  ಶ್ಲಾಘನೀಯ ಕಾಯ೯ ಕೈಗೊಂಡಿದೆ ಎಂದು  ಜೀವನ್ ಅಭಿನಂದಿಸಿದರು. ಕಾಯ೯ಕ್ರಮದಲ್ಲಿ ಏರ್ ಕಮೋಡರ್ ಜೈಸಿಂಹ ಸ ಭಾರತೀಯ ವಾಯು ಪಡೆಗಳ  ಮಹತ್ವ ಮತ್ತು  ಈ ಸೇನಾ ಪಡೆಗಳಿಗೆ ಸೇಪ೯ಡೆ ಸಂಬಂಧಿತ ಮಾಹಿತಿ ನೀಡಿದರು. ಸರಗೂರು ಸೈನಿಕ ಶಾಲೆಯ ಆಡಳಿತ ಮಂಡಳಿ ಪ್ರಮುಖ ಪ್ರವೀಣ್ ಮಾತನಾಡಿ, ಸೈನಿಕ ಶಾಲಾ  ಸೇಪ೯ಡೆಯ ಪರೀಕ್ಷೆಗೆ ಯಾವೆಲ್ಲಾ ರೀತಿ ತಯಾರಿ ಕೈಗೊಳ್ಳಬೇಕೆಂದು ತಿಳಿಸಿದರು.  ಕುನಾಲ್ ಕಡ್ತರೆ ಮತ್ತು ಪ್ರವೀಣ್ ಕಡ್ತರೆ  ಗಣಿತ ಮತ್ತು ಸಾಮಾಜಿಕ ಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾಥಿ೯ಗಳಿಗೆ  ಮಾಹಿತಿ  ನೀಡಿದರು. ಕಾಯ೯ಕ್ರಮ ಸಂಚಾಲಕ ರೋಟರಿ ಮಿಸ್ಟಿ ಹಿಲ್ಸ್ ನ ಡಾ.ಚೆರಿಯಮನೆ ಪ್ರಶಾಂತ್ ಮಾಹಿತಿ ನೀಡಿ, ಸೈನಿಕ ಶಾಲೆಗೆ ಸೇರಲಿಚ್ಚಿಸುವ ವಿದ್ಯಾಥಿ೯ಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮುಂದಿನ 10 ಭಾನುವಾರಗಳಂದು ಈ ತರಬೇತಿ ಮಾಹಿತಿ ಕಾಯಾ೯ಗಾರ ಆಯೋಜಿಸಲ್ಪಟ್ಟಿದೆ. ಪ್ರಸ್ತುತ ಜಿಲ್ಲೆಯಾದ್ಯಂತಲಿನ 15 ವಿದ್ಯಾಥಿ೯ಗಳು ಶಿಬಿರಕ್ಕ ನೋಂದಾಯಿಸಲ್ಪಟ್ಟಿದ್ದು ಆಸಕ್ತ ವಿದ್ಯಾಥಿ೯ಗಳಿಗೆ ಇನ್ನೂ ಅವಕಾಶ ಕಲ್ಪಿಸಲಾಗಿದೆ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ನಿದೇ೯ಶಕರಾದ   ಬಿ.ಕೆ. ರವಿಂದ್ರ ರೈ, ಪ್ರಸಾದ್ ಗೌಡ, ಪ್ರಕಾಶ್ ಪೂವಯ್ಯ, ಪಿ.ವಿ.ಅಶೋಕ್  ಹಾಜರಿದ್ದರು. :: ಸೈನಿಕಶಾಲೆಗೆ ಸೇಪ೯ಡೆ – ಅಜಿ೯ ಸಲ್ಲಿಕೆಗೆ ನ.9 ಕೊನೇ ದಿನ ::  ಸೈನಿಕಶಾಲೆಗಳಿಗೆ 6 ಮತ್ತು 9 ನೇ ತರಗತಿಗೆ ಸೇಪ೯ಡೆ ಸಂಬಂದಿತ ಅಜಿ೯ ಸಲ್ಲಿಸಲು ನ.9 ರವರೆಗೆ ಅವಕಾಶ ಕಲ್ಪಿಸಲಾಗಿದೆ . ಅ 30 ಕೊನೆಗೊಂಡಿದ್ದ ಅಜಿ೯ ಸಲ್ಲಿಕೆ  ದಿನಾಂಕವನ್ನು ಇದೀಗ  ನ.9 ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯ ವಿದ್ಯಾಥಿ೯ಗಳು ಸೈನಿಕ ಶಾಲೆ ಸೇಪ೯ಡೆ ನಿಟ್ಟಿನಲ್ಲಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ  ರೋಟರಿ ಮಿಸ್ಟಿ ಹಿಲ್ಸ್, ಎಸ್.ವಿ.ವೈ.ಎಂ. ಪ್ರಮುಖರು ಮನವಿ ಮಾಡಿದ್ದಾರೆ.

 

Share. Facebook Twitter Pinterest LinkedIn Tumblr Email WhatsApp
Previous Article*ವಿರಾಜಪೇಟೆ : ಅತಿ ಹೆಚ್ಚು ಎ.ಸಿ.ಸಿ.ಸಿಮೆಂಟ್ ಖರೀದಿ ಮಾಡಿದ ಸದಸ್ಯರಿಗೆ ಸಿಲ್ವರ್ ನಾಣ್ಯ ವಿತರಣೆ*
Next Article *ಕೂಡಿಗೆ ಗ್ರಾಮ ಪಂಚಾಯತಿ ಮಾಸಿಕ ಸಭೆ : ಕುಡಿಯುವ ನೀರು, ಶುಚಿತ್ವಕ್ಕೆ ಹೆಚ್ಚು ಒತ್ತು*

Related Posts

*ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*

February 12, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದ್ದ ಚಿನ್ನದ ದರದಲ್ಲಿ ಇಂದು ಕೊಂಚ…

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.