ಮಡಿಕೇರಿ ನ.3 NEWS DESK : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಕ್ಷಯ ಚಾರಿಟೇಬಲ್ ಟ್ರಸ್ಟ್ ರೋಟರಿ ರೆಡ್ ಕ್ರಾಸ್ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಮತ್ತು ಅಂಗಾಂಗ ದಾನ ನೋಂದಣಿ ಶಿಬಿರ ನಡೆಯಿತು. ಶಿಬಿರದಲ್ಲಿ 21 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. 14 ಫಲಾನುಭವಿಗಳಿಂದ ಅಂಗಾಂಗ ದಾನ ನೊಂದಣಿಗಳನ್ನು ಮಾಡಲಾಯಿತು. ರಕ್ತದಾನದ ಮಹತ್ವದ ಬಗ್ಗೆ ಡಾ.ವಿಶ್ವಾಸ್ ಅರಿವು ಮೂಡಿಸಿದರು. ಅಂಗಾಂಗದಾನ ನೋಂದಣಿಯ ಬಗ್ಗೆ DHEO ಶಾಂತಿ ಆರೋಗ್ಯ ಶಿಕ್ಷಣ ನೀಡಿ, ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಗಳಗಂಡ ರೋಗ ಮತ್ತು ರಕ್ತಹೀನತೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಹೆಚ್‍ಸಿ ಚೆನ್ನಯ್ಯನಕೋಟೆಎಎಂಒ ಡಾ. ಶಿವಪ್ಪ ಎಸಿಎಫ್ ಬಗ್ಗೆ ಮಾಹಿತಿ ನೀಡಿದರು. ವಿರಾಜಪೇಟೆ ತಾಲೂಕಿನ ಸುತ್ತಮುತ್ತಲಿನ ಹಾಡಿಗಳಲ್ಲಿ ಮಗುವಿಗೆ ಸೊಪ್ಪಿನ ರಸಗಳನ್ನು ಕುಡಿಸುತ್ತಿರುವುದರಿಂದ ಶಿಶುಮರಣವಾಗುತ್ತಿರುವ ಬಗ್ಗೆ ಎಲ್ಲಾ ಸಂಘ ಸಂಸ್ಥೆಯವರ ಸಮ್ಮುಖದಲ್ಲಿ ವಿಷಯ ಪ್ರಸ್ತಾಪಿಸಲಾಯಿತು ಮತ್ತು ಸಹಕಾರವನ್ನು ಕೋರಲಾಯಿತು. ಸಹಕರಿಸಲು ಎಲ್ಲಾ ಸಂಘ-ಸಂಸ್ಥೆಯವರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು. ಸಿಹೆಚ್‌ಒ ವಿಕ್ರಂ, ಸಾಗರ್, ಪಿಹೆಚ್‌ಸಿಒ ಸುಧಾ, ಆಶಾ ಕಾರ್ಯಕರ್ತೆ ಹೇಮಾವತಿ, ಆರ್‌ಕೆಎಸ್‌ಕೆ ಕೌನ್ಸಿಲರ್ ಸತೀಶ್, ಆಂಬುಲೆನ್ಸ್ ಚಾಲಕ ಚಂಗಪ್ಪ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಅಜಿತ್ ಕರುಂಬಯ್ಯ, ಸಾರ್ವಜನಿಕರು ರಕ್ತದಾನ ಮಾಡಿದರು. CHO ಆಶಿಕಾ, ಆಶಾ ಕಾರ್ಯಕರ್ತರಾದ ದಿವ್ಯ, ಜಲಜಾಕ್ಷಿ ಮತ್ತು ವೈದ್ಯಕೀಯ ವಿದ್ಯಾರ್ಥಿಯಾದ ತುಷಾರ್ ಕುಲಕರ್ಣಿ, ಸಾರ್ವಜನಿಕರು ಅಂಗಾಂಗ ದಾನ ನೋಂದಣಿ ಮಾಡಿಸಿದರು. ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಸೋಮಯ್ಯ ಆರೋಗ್ಯ ಇಲಾಖೆ ಮತ್ತು ಎಲ್ಲಾ ಸ್ವಯಂಸೇವಾ ಸಂಘಗಳ ಸಹಕಾರದಿಂದ ಕಾರ್ಯಕ್ರಮವನ್ನು ಆಯೋಜಿಸಿದರು. PHC ಚೆನ್ನಯವನ ಕೋಟೆ ಹಾಗೂ CHC ಪಾಲಿ ಬೆಟ್ಟದ ಆಡಳಿತ ವೈದ್ಯಾಧಿಕಾರಿಗಳು ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.











