ಮಡಿಕೇರಿ NEWS DESK ನ.4 : ಸಮಾಜ ಸೇವಕರು, ರಾಜಕೀಯ ಮುಖಂಡರು ಮತ್ತು ಉದ್ಯಮಿಗಳಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರ ಜನ್ಮ ದಿನವನ್ನು ನಾಪಂಡ ಮುತ್ತಪ್ಪ, ಮುದ್ದಪ್ಪ ಅಭಿಮಾನಿ ಬಳಗ ಅರ್ಥಪೂರ್ಣವಾಗಿ ಆಚರಿಸಿತು. ಜನ್ಮ ದಿನದ ಪ್ರಯುಕ್ತ ಬಳಗದ ಪ್ರಮುಖರು ಇಂದು ಮಡಿಕೇರಿಯ ಜಿಲ್ಲಾಸ್ಪತ್ರೆಯ 400 ಕ್ಕೂ ಹೆಚ್ಚು ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆರೋಗ್ಯ ವಿಚಾರಿಸಿದರು. ಅಭಿಮಾನಿ ಬಳಗದ ತೆಕ್ಕಡ ಸಂತೋಷ್ ಕಾರ್ಯಪ್ಪ, ಕುಟ್ಟಪ್ಪ, ಬೆಳ್ಯಪ್ಪ, ತಂಬುಕುತ್ತಿರ ಭೀಮಯ್ಯ, ಪೂಣಚ್ಚ, ಅನಿಲ್, ಜೀವನ್, ರಮೇಶ್ ಹಾಗೂ ಮಡಿಕೇರಿ ವಿಭಾಗದ ಯುವ ಮುಖಂಡ ನಾಪಂಡ ರವಿ ಮತ್ತಿತರರು ಈ ಸಂದರ್ಭ ಹಾಜರಿದ್ದರು.











