ಮಡಿಕೇರಿ ನ.5 NEWS DESK : ಮಡಿಕೇರಿ ನಗರದ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಪುಟಾಣಿ ‘ಮಾಸ್ಟರ್ ಶೆಫ್’ಗಳಿಂದ ರುಚಿಕರ ತಿಂಡಿಗಳು ಘಮಘಮಿಸಿತು. ಪೋಷಕರ ಮಮತೆ ಹಾಗೂ ಪ್ರೋತ್ಸಾಹದ ನಡುವೆ ಶಾಲಾ ಆವರಣದಲ್ಲಿ ನಡೆದ ಆಹಾರ ಉತ್ಸವವು ಗಮನ ಸೆಳೆಯಿತು. ಪುಟ್ಟ ತಾರೆಯರು ತೋರಿಸಿದ ಸೃಜನಶೀಲತೆ, ತಂಡದ ಮನೋಭಾವ ಮತ್ತು ಆಹಾರ ಪ್ರದರ್ಶನದ ನವೀನ ವಿಧಾನಗಳು ನೋಡುಗರ ಮನ ಗೆದ್ದವು. ಕಾರ್ಯಕ್ರಮವನ್ನು ಶಾಲೆಯ ಪ್ರಾಂಶುಪಾಲರಾದ ಜಾಯಿಸಿ ವಿನಯ್ ಅವರು ಉದ್ಘಾಟಿಸಿ ಮಾತನಾಡಿ, ಎಎಲ್‌ಜಿ ಕ್ರೆಸೆಂಟ್ ಶಾಲೆ ಕೇವಲ ಪಾಠಪುಸ್ತಕಗಳ ಪಾಠವನ್ನಷ್ಟೇ ಅಲ್ಲ, ಬದಲಾಗಿ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಮುಂದಾಗಿದೆ. ಪುಟಾಣಿಗಳ ಹಾಗೂ ಪೋಷಕರ ಯಶಸ್ವಿ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು. ಶಿಕ್ಷಕರ ಅವಿರತ ಶ್ರಮಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.











