ಮಡಿಕೇರಿ ನ.5 NEWS DESK : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾ ಸಮಿತಿಯ ಸಭೆಯು ನಗರದ ವ್ಯಾಲಿವ್ಯೂ ಹೊಟೇಲಿನ ಸಭಾಂಗಣದಲ್ಲಿ ನಡೆಯಿತು. ಅಸೋಸಿಯೇಷನ್‍ನ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಆಶ್ರಯದಲ್ಲಿ ನಡೆಯಲಿರುವ ಕ್ರಿಸ್ಮಸ್ ಗಾಯನ ಸ್ಪರ್ಧೆ ಬಗ್ಗೆ ಚರ್ಚಿಸಲಾಯಿತು. ವೈಯುಕ್ತಿಕ ಕಾರಣದಿಂದ ತೆರವಾಗಿದ್ದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸೋಮವಾರಪೇಟೆಯ ಒ.ಎಲ್.ವಿ ದೇವಾಲಯಕ್ಕೆ ಸೇರಿದ ಅಂತೋಣಿ ಡಿಸೋಜ ಅವರನ್ನು ಸಭೆಯಲ್ಲಿ ಸರ್ವನು ಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅಸೋಸಿಯೇಷನ್ ಸದಸ್ಯರಾದ ಜೋಸೆಫ್, ರೋಡ್ರಿಗಸ್, ಜೂಡಿ ಡೇವಿಡ್ ವಾಜ್, ಜೇಮ್ಸ್ ಡಿಸೋಜ, ವಿ.ಎ.ಲಾರೆನ್ಸ್ ಹಾಜರಿದ್ದರು.











