ಮಡಿಕೇರಿ ನ.7 NEWS DESK : ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವು ನಗರದ ರಾಜ್ ದರ್ಶನ್ ಹೋಟೆಲ್‍ನಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯಿತು. ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವು ಬಹಳ ಒಂದು ವಿನೂತನವಾದ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ, ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಒಂದು ಅತ್ಯುತ್ತಮ ಯೋಜನೆಯಾಗಿದೆ. ನಮ್ಮ ಭಾರತ ದೇಶವು ಸಂಸ್ಕøತಿಗಳ ನೆಲೆ ಬೀಡು. ನಮ್ಮ ದೇಶದಲ್ಲಿ ಅನೇಕ ರೀತಿಯ ಕಲೆ, ಸಂಸ್ಕøತಿ, ಕಸುಬುಗಳಿವೆ. ಇವೆಲ್ಲವನನ್ನು ಒಂದು ಚಾವಣಿಗೆ ತರುವಂತಹ ಯೋಜನೆ ಇದಾಗಿದೆ. ಬೇರೆ ಬೇರೆ ರೀತಿಯ ಉದ್ಯೋಗಗಳನ್ನು ಕಲಿಯಲು ಹಾಗೂ ಉತ್ತೇಜನ ನೀಡಲು ಸರ್ಕಾರದ ವತಿಯಿಂದ ಸಾಲ ಸೌಲಭ್ಯಗಳನ್ನು ನೀಡಿ ಸಹಾಯವನ್ನು ಮಾಡುವ ಒಂದು ಒಳ್ಳೆಯ ಯೋಜನೆ ಸರ್ಕಾರವು ತಂದಿದೆ. ಈ ಯೋಜನೆಯ ಉಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ತಿಳಿಸಿದರು. ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೂಪ ಅವರು ಮಾತನಾಡಿ ಉದ್ಯಮಿ ಹಾಗೂ ಉದ್ಯೋಗ ನೀಡು ಎಂಬುದು ನಮ್ಮ ಪರಿಕಲ್ಪನೆಯಾಗಿದೆ. ಈಗಾಗಲೇ ಕೌಶಲ್ಯಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ 1425 ಫಲಾನುಭವಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಆದರೆ ಹಾಜರಿರುವವರ ಸಂಖ್ಯೆ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯು ಉದ್ಯೋಗಿಗಳಿರುವ ಜಿಲ್ಲೆ ಎಂದು ಹೆಸರುವಾಸಿಯಾಗಲು ನಿಮ್ಮೆಲ್ಲರ ಪಾತ್ರ ಬಹುಮುಖ್ಯವಾಗಿದೆ ಎಂದರು. ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವು ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಮುಂದಿನ ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ಈ ಯೋಜನೆಯು ಒಂದು ದಾರಿ ದೀಪವಾಗಿದೆ ಎಂದು ಹೇಳಿದರು. ಹಾಗೆಯೇ ಎಲ್ಲರೂ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಬರುವ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿನಿರ್ದೇಶಕರಾದ ಹನುಮಂತರಾಯ ಅವರು ಮಾತನಾಡಿ ನಮ್ಮ ಭಾರತವು ಅನೇಕ ಕುಶಲಕರ್ಮಿಗಳಿಂದ ದುಡಿದು ಬಂದ ದೇಶವಾಗಿದೆ. ಅವರ ಕಸುಬುಗಳನ್ನು ಮುಂದೆಯೂ ಸಹ ಮುಂದುವರೆಸಿಕೊಂಡು ಹೋಗುವ ಉದ್ದೇಶ ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮದ್ದಾಗಿದೆ. ಈ ಯೋಜನೆಯಡಿ ಉತ್ತಮ ತರಬೇತಿಯನ್ನು ನೀಡಿ ಅವರಿಗೆ ಸುಧಾರಿತ ಉಪಕರಣಗಳನ್ನು ಒದಗಿಸಿ ಅವರಿಗೆ ಉತ್ತೇಜನ ನೀಡುವುದಾಗಿದೆ. ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿಈ ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು. ಪ್ರದಾನಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮದ ಎಲ್‍ಡಿಎಂ ಗಂಗಾಧರಯ್ಯ, ಡಿಎಫ್‍ಓ ಸುಂದರ್ ಶರಿಗರ್ ಮತ್ತಿತರರು ಇದ್ದರು.










