ಮಡಿಕೇರಿ ನ.7 NEWS DESK : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿರಾಜಪೇಟೆ ಕರ್ನಾಟಕ ಸಂಘದ ಶಾಲಾ ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಫರ್ಧೆಗಳನ್ನು ಆಯೋಜಿಸಿದ್ದರು. ಶಾಲಾ ವಿಭಾಗದಲ್ಲಿ ತ್ರಿವೇಣಿ ಆಂಗ್ಲ ಮಾಧ್ಯಮ ಸಂಸ್ಥೆಯ ಪ್ರಾಥಮಿಕ ವಿಭಾಗವು ನೃತ್ಯದಲ್ಲಿ ಪ್ರಥಮ ಬಹುಮಾನ, ಫ್ರೌಢಶಾಲಾ ಬಾಲಕಿಯರು ನೃತ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದರು. ಸಾರ್ವಜನಿಕ ವಿಭಾಗದಲ್ಲಿ ಸಂಸ್ಥೆಯ ಶಿಕ್ಷಕಿ ಆಶಾ, ಅಕ್ಕಮ್ಮ , ಕೊಡವ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ. ಮತ್ತೊಬ್ಬ ಶಿಕ್ಷಕಿ ಜ್ಯೋತಿ, ಕನ್ನಡ ಗಾಯನದಲ್ಲಿ ತೃತೀಯ ಸ್ಥಾನಗಳಿಸಿದರು.











