
ನಾಪೋಕ್ಲು ನ.8 NEWS DESK : ಅವಂದೂರು ಗೋಪಾಲಕೃಷ್ಣ ಯುವ ಸಂಘ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಎರಡನೇ ವರ್ಷದ ರಾಜ್ಯ ಮಟ್ಟದ ತೆಂಗಿನಕಾಯಿ ಗುಂಡಿ ಹೊಡೆಯುವ ಸ್ಪರ್ಧೆ ನಡೆಯಿತು. ಅವಂದೂರು ಗ್ರಾಮದ ಊರಂಬಲ ಬಳಿಯ ಮದೆ ಪಂಚಾಯತ್ ಆಟದ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರು ಕೆದಂಬಾಡಿ ಎಸ್.ಪುಟ್ಟಯ್ಯ ಉದ್ಘಾಟಿಸಿದರು. ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷ ದೇವಾಯಿರ ಕೀರ್ತನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಮಾಜಿ ಶಾಸಕರು ಕೆ.ಜಿ.ಬೋಪಯ್ಯ ಭಾಗವಹಿಸಿ ಮಾತನಾಡಿ, ಅವಂದೂರು ಎಂಬ ಸಣ್ಣ ಗ್ರಾಮದಲ್ಲಿ ರಾಜ್ಯಮಟ್ಟದ ತೆಂಗಿನಕಾಯಿ ಗುಂಡು ಹೊಡೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಸ್ಲಾಘನೀಯ, ಎಲ್ಲ ಗ್ರಾಮದಲ್ಲೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು. ದೇಶ ಸೇವೆ ಮಾಡಿದ ಸೈನಿಕರಿಗೆ ಸನ್ಮಾನ ಕಾರ್ಯ ನಿಜಕ್ಕೂ ಹೆಮ್ಮೆ ಎಂದು ಕಿವಿ ಮಾತು ಹೇಳಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ zಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೋವಿ ಎಂಬುದು ಕೊಡಗಿನ ಜನರ ಅವಿಭಾಜ್ಯ ಅಂಗವಾಗಿದ್ದು, ಹುಟ್ಟು ಮತ್ತು ಸಾವು ಎರಡರಲ್ಲೂ ನಾವು ಕೋವಿಯನ್ನು ಉಪಯೋಗಿಸುತ್ತಿದ್ದೇವೆ. ಅದನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮೆಲ್ಲರದು ಎಂದರು. ವೇದಿಕೆಯಲ್ಲಿ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಳ್ಯದ ಗಿರೀಶ್, ಅವಂದೂರು ಗ್ರಾಮ ಪಂಚಾಯತಿ ಸದಸ್ಯರು ಊರೋಲನ ತೇಜಕುಮಾರ್, ದೇವಾಯಿರ ಮೋಹಿನಿ ರಾಘವಯ್ಯ ಹಾಗೂ ದಾನಿಗಳು ಉಪಸ್ಥಿತಿ ಇದ್ದರು. ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧರನ್ನು ಯುವಕ ಸಂಘ ಹಾಗೂ ಗ್ರಾಮಸ್ಥರ ಪರವಾಗಿ ಗಣ್ಯರು ಸನ್ಮಾನಿಸಿ ಗೌರವಿಸಿದ್ದರು. ಇದೇ ಸಂದರ್ಭ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. .22 ರೈಪಾಲ್ ಶೂಟಿಂಗ್., 12 ಬೋರ್ ತೋಟದ ಕೊವಿ, ಏರ್ ಗನ್ ನಲ್ಲಿ ಮೊಟ್ಟೆಗೆ ಹೊಡೆಯುವುದು ಈ ಮೂರು ವಿಭಾಗದಲ್ಲಿ ಸ್ಪರ್ಧೆಗಳು ಜರಗಿತ್ತು. ಈ ಸಂದರ್ಭ ರಾಜ ಬಾರಿ ನುರಿತ ಸ್ಪರ್ಧಾರ್ಥಿಗಳು ಭಾಗವಹಿಸಿ ಸ್ಪರ್ಧೆ ಮಾಡಿ ವಿಜೃಂಭಿಸಿ ಕ್ರೀಡಾ ಪ್ರೇಮಿಗಳಿಗೆ ಕ್ಷಣ ಕ್ಷಣಕ್ಕೂ ಕಾತುರತೆಯನ್ನು ಹೆಚ್ಚಿಸಿದರು.
ವಿಜೇತರರು:: .22 ರೈಪಾಲ್ ಸ್ಪರ್ಧೆ- ಪ್ರಥಮ ಪ್ರವೀಣ್ ಮಿತ್ತೂರು, ದ್ವಿತೀಯ ಬೋಪಣ್ಣ ಮಣವಟ್ಟಿರ, ತೃತೀಯ ನಾಸಿರ್ ಪೊನ್ನಪೇಟೆ. 12 ಬೋರ್ ತೋಟದ ಕೊವಿ ಸ್ಪರ್ಧೆ – ಪ್ರಥಮ ನಂಜಪ್ಪ ಮಂಡಿರ, ದ್ವಿತೀಯ ಕರಣ್ ವಿ.ಎಸ್., ತೃತೀಯ ವಿಹಾನ್ ದೇವಯ್ಯ ಮಂದಪಂಡ. ಏರ್ ಗನ್ ನಲ್ಲಿ ಮೊಟ್ಟೆಗೆ ಹೊಡೆಯುವ ಸ್ಪರ್ಧೆ – ಪ್ರಥಮ ಚಿರಂತ್. ಡಿ, ದ್ವಿತೀಯ ಶರತ್ ಕಬ್ಬಚ್ಚೀರ, ತೃತೀಯ ಶ್ಯಾಮ್ ಕನ್ನಿಕಂಡ.
ವರದಿ : ದುಗ್ಗಳ ಸದಾನಂದ.










