ಮಡಿಕೇರಿ ನ.10 NEWS DESK : ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ನಗರದ ಓಂಕಾರ ಸದನದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಸಾಧಕರನ್ನು ಸನ್ಮಾನಿಸಿದರು. ಕಾವಾಡಿಯ ಕಾಮಧೇನು ಗೋಶಾಲೆಯ ರಾಮಚಂದ್ರಭಟ್ (ಗೋಪಾಲನೆ), ಮಡಿಕೇರಿಯ ಪತ್ರಕತ೯ ಬಿ.ಜಿ. ಅನಂತಶಯನ ( ಸಾಮಾಜಿಕ ಸೇವೆ), ಮಡಿಕೇರಿಯ ಚೆರಿಯಮನೆ ಡಾ. ಆರ್. ಪ್ರಶಾಂತ್ (ವೈದ್ಯಕೀಯ), ಕಡಗದಾಳು ಗ್ರಾಮದ ಮಾದೇಟಿರ ಬೆಳ್ಯಪ್ಪ (ರಂಗಭೂಮಿ) , ಮಡಿಕೇರಿಯ ಕಡ್ಲೇರ ತುಳಸಿ ಮೋಹನ್ (ಸಂಘಟನೆ), ಬಾಳೆಲೆಯ ಅನ್ವಿತ್ ಕುಮಾರ್ (ಸಂಗೀತ), ಕೆ.ಆಕ್. ನಗರದ ಕೇಬಲ್ ಮಹದೇವ (ಕೖಷಿ) ಇವರನ್ನು ಸಮಥ೯ ಕನ್ನಡಿಗರು ಸಂಸ್ತೆಯ ವಾಷಿ೯ಕ ಪ್ರಶಸ್ತಿ ನೀಡಿ ಗೌರವಿಸಿತು. ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಎ.ಸಿ. ದೇವಯ್ಯ, ಪ್ರಾಚೀನ ಕಾಲದಿಂದಲೂ ದೇವಾಲಯಗಳಲ್ಲಿ ಸ್ಥಳೀಯ ಸಂಸ್ಕೖತಿ, ಸಾಹಿತ್ಯ ಚಟುವಟಿಕೆಗಳಿಗೆ ಆಶ್ರಯ ನೀಡಲಾಗುತ್ತಾ ಬರಲಾಗಿದೆ. ಓಂಕಾರ ಸದನದಲ್ಲಿಯೂ ಸಾಂಸ್ಕೖತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು. ಶ್ರೀ ಆಂಜನೇಯ ದೇವಾಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೖದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಇದರಿಂದ ಭಕ್ತರಿಗೆ ಮತ್ತಷ್ಟು ಸೌಲಭ್ಯಗಳು ದೊರಕುತ್ತವೆ ಎಂದರು. ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಕನ್ನಡಕ್ಕೆ ಆತಂಕ ಬಂದೊದಗುತ್ತದೆ ಎಂಬ ಆತಂಕ ಅನಗತ್ಯ, ಜಗತ್ತಿನಲ್ಲಿ ಕನ್ನಡದಂಥ ಲಿಪಿ ಹೊಂದಿರುವ ಭಾಷೆಗೆ ಎಂದಿಗೂ ಅಳಿವಿಲ್ಲ. ಹೀಗಾಗಿ ಕನ್ನಡ ಸುರಕ್ಷಿತ ಭಾಷೆ ಎಂಬ ಅಭಿಮಾನ ನಮ್ಮೆಲ್ಲರಲ್ಲಿಯೂ ಇರಲಿ ಎಂದರಲ್ಲದೇ, ಕನ್ನಡ ಭಾಷೆ , ಸಂಸ್ಸೖತಿ ಪೋಷಿಸುವ ನಿಟ್ಟಿನಲ್ಲಿ ಸಮಥ೯ ಕನ್ನಡಿಗಗಂಥ ಸಂಸ್ಥೆ ವೈವಿಧ್ಯಮಯ ಕಾಯ೯ಕ್ರಮ ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಎಲ್ಲಿಯವರೆಗೆ ಕನ್ನಡ ಭಾಷೆ, ಸಾಹಿತ್ಯ , ಸಂಸ್ಕೖತಿಯನ್ನು ವಿಶ್ವದೆಲ್ಲೆಡೆ ವ್ಯಾಪಿಸುವ ಪ್ರಯತ್ನ ಕಥೆ, ಚಿತ್ರ, ಹಾಡು, ನೖತ್ಯ, ಮುಂತಾದವುಗಳ ಮೂಲಕ ಆಗುತ್ತದೆಯೇ, ಅಲ್ಲಿಯವರೆಗೂ ಕನ್ನಡ ಜೀವಂತಿಕೆಯ ಭಾಷೆಯಾಗಿ ವಿಶ್ವವ್ಯಾಪಿ ಕಂಗೊಳಿಸುವುದರಲ್ಲಿ ಸಂಶಯ ಬೇಡ ಎಂದರು. ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಸಮಥ೯ ಕನ್ನಡಿಗರು ಸಂಸ್ಥೆ 8 ವಷ೯ಗಳಿಂದ ಸಾಕಷ್ಟು ಕಾಯ೯ಕ್ರಮಗಳ ಮೂಲಕ ವಿದ್ಯಾಥಿ೯ಗಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಎಂದರು. ಸಮಥ೯ ಕನ್ನಡಿಗರು ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ವೇದಿಕೆಯಲ್ಲಿದ್ದರು. ಪ್ರತಿಮಾ ಹರೀಶ್ ರೈ ನಿರೂಪಿಸಿ, ದಿವ್ಯ ಸತೀಶ್ ಸ್ವಾಗತಿಸಿ, ಸೌಮ್ಯ ಭಟ್ ವಂದಿಸಿದರು. ತಳೂರು ಉಷಾರಾಣಿ ನಿವ೯ಹಿಸಿದರು. ವಿವಿಧ ಸ್ಪಧಾ೯ ವಿಜೇತರಿಗೆ ಬಹುಮಾನ ನೀಡಲಾಯಿತು. :: ಕವಿಗೋಷ್ಟಿ :: ಸಮಥ೯ ಕನ್ನಡಿಗರು ಸಂಸ್ಥೆಯಿಂದ ಕನ್ನಡ ಕವಿಗೋಷ್ಟಿ ಆಯೋಜಿಸಲ್ಪಟ್ಟಿತ್ತು. ಗಿರೀಶ್ ಕಿಗ್ಗಾಲು, ಹೇಮಂತ್ ಪಾರೇರ, ಕಡ್ಲೇರ ತುಳಸಿ ಮೋಹನ್, ಹರೀಶ್ ಕಿಗ್ಗಾಲು, ಕೂಡಕಂಡಿ ಓಂಶ್ರೀ ದಯಾನಂದ, ಅದಿಲ್ ಬಿ.ಎ., ಅಂಬೆಕಲ್ ಸುಶೀಲಾ ಕುಶಾಲಪ್ಪ, ತೆನ್ನೀರಾ ಟೀನಾ ಚಂಗಪ್ಪ, ಪಾಲ್ಗೊಂಡು ಕವನ ವಾಚಿಸಿದರು. ಚಿತ್ರಾ ಆಯ೯ನ್ ನಿರೂಪಿಸಿ, ಅಪಿ೯ತಾ ಸಂದೀಪ್ ನಿವ೯ಹಿಸಿದರು.











