ವಿರಾಜಪೇಟೆ ನ.11 NEWS DESK : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿರಾಜಪೇಟೆ ತಾಲ್ಲೂಕು ಸಮಿತಿ ವತಿಯಿಂದ ವಿರಾಜಪೇಟೆ ಕಚೇರಿಯಲ್ಲಿ ಸೆಸ್ಕ್ ಉಪವಿಭಾಗದ ಸಹಾಯಕ ಅಭಿಯಂತರರಾದ ಅಭಿಷೇಕ್ ಅವರು ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎಂ.ಗಣೇಶ ಹಾಗೂ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ.ಹಂಸ, ಕಾರ್ಯದರ್ಶಿ ಎನ್.ಜಿ.ಚಂದ್ರಶೇಖರ್ ಮತ್ತು ಸದಸ್ಯರಾದ ರಾಜ, ರಫೀಕ್, ನೌಸರ್, ಯೂಸುಫ್, ರಾಜೇಶ್, ಮನು ಉಪಸ್ತಿತರಿದ್ದರು.











