

ಮಡಿಕೇರಿ ನ.11 NEWS DESK : ದಾವಣಗೆರೆಯಲ್ಲಿ ನಡೆದ 14ರ ವಯೋಮಿತಿಯ 60 ಕೆ.ಜಿ.ವಿಭಾಗದ ಕರಾಟೆ ಪಂದ್ಯಾವಳಿಯಲ್ಲಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮನೀಶ್ ತೃತೀಯ ಬಹುಮಾನ ಪಡೆದುಕೊಂಡಿದ್ದಾನೆ. ಮನೀಶ್ ಹೊಸ ತೋಟ ಜಿಎಂಪಿ ಶಾಲೆಯ ದೈಹಿಕ ಶಿಕ್ಷಕಿ ಕೆಂಚಮ್ಮ ಹಾಗೂ ಅಂಬರೀಶ್ ದಂಪತಿಯ ಪುತ್ರ. ಇವನು ಕರಾಟೆ ತರಬೇತುದಾರರಾದ ಮುಖೇಶ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.











