ಮೂರ್ನಾಡು ನ.12 NEWS DESK : ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾಗಿ ತೇಲಪಂಡ ಸಿ. ಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಪುದಿಯೊಕ್ಕಡ ಕಾಶಿ ಕರುಂಬಯ್ಯ ಅವರ ಆರೋಗ್ಯದಲ್ಲಿ ಏರುಪೇರು ಇದ್ದು, ಸೇವೆಯಲ್ಲಿ ಮುಂದುವರೆಯಲು ಸಾಧ್ಯವಾಗದಕಾರಣ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಸಮಾಜದ ಅಧ್ಯಕ್ಷರಾಗಿ ತೇಲಪಂಡ ಸಿ. ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಕೋಟೇರ ಎ.ರಾಜ, ಗೌ. ಕಾರ್ಯದರ್ಶಿಯಾಗಿ ಚಂಗಂಡ ಸೂರಜ್ ತಮ್ಮಯ್ಯ, ಖಜಾಂಚಿಯಾಗಿ ಅಮ್ಮಟಂಡ ಎಮ್. ದೇವಯ್ಯ, ನಿರ್ದೇಶಕರುಗಳಾಗಿ ತಿರುಟೆರ ಕಾಶಿ, ಪೋತಂಡರಾಜ, ಅಮ್ಮಟಂಡ ಮನು, ಮುಂಡಂಡ ತಿಮ್ಮಣ್ಣ, ಪಳಂಗಂಡ ಹರೀಶ್, ಮಚ್ಚಾರಂಡ ಸುಬ್ರಮಣಿ, ಚೇನಂಡ ಲಾಲ, ಮುಕ್ಕಾಟಿರ ಹರೀಶ್, ಚೌರೀರ ಅಪ್ಪಣ್ಣ, ಮಂಡೆಪಂಡ ಕುಟ್ಟಯ್ಯ, ಚೌರೀರ ಪ್ರಕಾಶ್, ಅಚ್ಚಕಾಳಿರ ಅಯ್ಯಪ್ಪ, ಮುಂಡಂಡ ಜಮುನ, ಪಾಂಡಂಡ ಸ್ವಾತಿ ಮತ್ತು ಕುಂಜಿಲಂಡ ಗ್ರೇಸಿ ಅವರುಗಳು ಆಡಳಿತ ಮಂಡಳಿಯಲ್ಲಿ ತಮ್ಮದೆ ಸ್ಥಾನಗಳಲ್ಲಿ ಮುಂದುವರೆಯುತ್ತಾರೆ. ಮೂಡೇರ ಮನು ಮಾದಪ್ಪ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವರದಿ : ಟಿ.ಸಿ. ನಾಗರಾಜ್, ಮೂರ್ನಾಡು.











