ಮಡಿಕೇರಿ ನ.12 NEWS DESK : ಕೊಡಗು ಪದವಿಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿರಾಜಪೇಟೆ ತಾಲ್ಲೂಕನ್ನು ಪ್ರತಿನಿಧಿಸಿದ್ದ ಸರ್ವದೈವತ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಥ್ರೋಬಾಲ್ ನಲ್ಲಿ ಬಾಲಕರ ತಂಡ ಪ್ರಥಮ, ವಾಲಿಬಾಲ್ ನಲ್ಲಿ ಬಾಲಕಿಯರ ತಂಡ ಪ್ರಥಮ ಮತ್ತು ಚೆಸ್ ನಲ್ಲಿ ಆರೋಮಲ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಟೇಬಲ್ ಟೆನ್ನಿಸ್ ನಲ್ಲಿ ನೀಲೇಶ್ ರಾಜ್ಯಮಟ್ಟವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಪ್ರಮೋದ್ ಗೌಡ ತರಬೇತಿ ನೀಡಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಬೋಧಕ ವರ್ಗ ಹರ್ಷ ವ್ಯಕ್ತಪಡಿಸಿದೆ.










