Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ : ಎಸ್.ಕೆ.ಎಫ್.ಸಿ ಚಾಂಪಿಯನ್, ಸೋಕರ್ ಯುನೈಟೆಡ್ ಅಮ್ಮತ್ತಿ ರನ್ನರ್ಸ್*
ಇತ್ತೀಚಿನ ಸುದ್ದಿಗಳು

*ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ : ಎಸ್.ಕೆ.ಎಫ್.ಸಿ ಚಾಂಪಿಯನ್, ಸೋಕರ್ ಯುನೈಟೆಡ್ ಅಮ್ಮತ್ತಿ ರನ್ನರ್ಸ್*

November 13, 20253 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ನ.13 NEWS DESK  : ಮರಗೋಡು ಎಸ್ ಕೆ ಎಫ್ ಸಿ ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸೋಕರ್ ಯುನೈಟೆಡ್ ಅಮ್ಮತ್ತಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು. ಹಾಗೆಯೆ 3 ಹಾಗೂ 4 ಸ್ಥಾನವನ್ನು ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ತಂಡ ಹಾಗೂ ಎಂ.ಎಫ್.ಸಿ ಅಮ್ಮತ್ತಿ ತಂಡ ಪಡೆದುಕೊಂಡಿತು. ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ಏಳು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು. ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ಹಾಗೂ ಸೋಕರ್ ಯುನೈಟೆಡ್ ಅಮ್ಮತ್ತಿ ತಂಡದ ನಡುವೆ ನಡೆದ ರೋಚಕ ಹಣಹಣಿಯಲ್ಲಿ 2 ತಂಡವು ಪೂರ್ಣ ಅವಧಿಯಲ್ಲಿ 1-1 ಗೋಲ್ ಗಳ ಸಮಬಲ ಸಾಧಿಸಿ ಪೆನಲ್ಟಿಯತ್ತ ಸಾಗಿತು. ಪೆನಲ್ಟಿ ಶೂಟೌಟ್ ನಲ್ಲಿ ಸೋಕರ್ ಯುನೈಟೆಡ್ ಅಮ್ಮತ್ತಿ ತಂಡವು 4-2 ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು. ದ್ವಿತೀಯ ಸೆಮಿ ಫೈನಲ್ ಪಂದ್ಯವು ಅತಿಥೇಯ ಎಸ್ ಕೆ ಎಫ್ ಸಿ ಹಾಗೂ ಎಂ, ಎಫ್ ಸಿ ತಂಡದ ನಡುವೆ ನಡೆದ ರೋಚಕ ಹಣಹಣಿಯಲ್ಲಿ ಎಸ್ ಕೆ ಎಫ್ ಸಿ ,ತಂಡವು 4-0 ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು. ಫೈನಲ್ ಪಂದ್ಯವು ಅತಿಥೇಯ ಎಸ್ ಕೆ ಎಫ್ ಸಿ ಹಾಗೂ ಸೋಕರ್ ಯುನೈಟೆಡ್ ಅಮ್ಮತ್ತಿ ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಸ್ ಕೆ ಎಫ್ ಸಿ ಮರಗೋಡು ತಂಡವು ಸೋಕರ್ ಯುನೈಟೆಡ್ ಅಮ್ಮತಿ, ವಿರುದ್ಧ 2-1 ಅಂತರದಲ್ಲಿ ಗೆದ್ದು ಎಸ್ ಕೆ ಎಫ್ ಸಿ ಮರಗೋಡು ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಸೀಸನ್-1 ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಎಂ ಎಫ್ ಸಿ ತಂಡದ ಶೇಷಪ್ಪ ಪಡೆದು ಕೊಂಡರೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಸೋಕರ್ ಯುನೈಟೆಡ್ ಅಮ್ಮತಿ, ತಂಡದ ಶಿವು ಪಡೆದು ಕೊಂಡರು,ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಯನ್ನು ಎಸ್ ಕೆಎಫ್ ಸಿ ತಂಡದ ರಮೇಶ್ ಪಡೆದು ಕೊಂಡರೆ , ಉದಯೋನ್ಮೋಕ ಪ್ರಶಸ್ತಿಯನ್ನು ಎಸ್ ಕೆಎಫ್ ಸಿ ತಂಡದ ಪ್ರವೀತ್ ಪಡೆದರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಸೋಕರ್ ಯುನೈಟೆಡ್ ಅಮ್ಮತಿ, ತಂಡದ ನಾಯಕ ರಕ್ಷಿತ್ (ರಕ್ಷಿ )ಪಡೆದು ಕೊಂಡರು. ಎಸ್ ಕೆ ಎಫ್ ಸಿ ಫುಟ್ಬಾಲ್ ಆಯೋಜಕರಾದ ಎಂ.ಎಸ್. ವಿಜಯ್ ಇವರ ಸಮ್ಮುಖದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ “ಕ್ರೀಡೆ ಮಾನವನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಮೊಗೇರ ಸಮುದಾಯದ ಸಂಘಟನೆಗಳು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿ ಯುವಕರಲ್ಲಿ ಶಿಸ್ತು ಮತ್ತು ಸಹಕಾರದ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ” ಎಂದರು. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷರಾದ ಜನಾರ್ಧನ್ ಮರಗೋಡು ಮಾತನಾಡಿ “ಕ್ರೀಡೆಗಳು ಯುವಕರಲ್ಲಿ ಶಿಸ್ತಿನ ಮನೋಭಾವವನ್ನು ಬೆಳೆಯಿಸುತ್ತವೆ. ಗೆಲುವು–ಸೋಲುಗಳು ಸಹಜ, ಆದರೆ ಕ್ರೀಡಾಸ್ಫೂರ್ತಿ ಎಂದಿಗೂ ಉಳಿಯಬೇಕು. ಈ ಕ್ರೀಡಾಕೂಟದ ಮೂಲಕ ಯುವಕರು ತಮ್ಮ ಪ್ರತಿಭೆಯನ್ನು ತೋರಿಸಲು ವೇದಿಕೆ ಸಿಕ್ಕಿದೆ.”ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರಗೋಡು ಪಂಚಾಯತಿ ಉಪಾಧ್ಯಕ್ಷರಾದ ಕವಿತ ಪ್ರಕಾಶ್ ಮಾತನಾಡಿ, ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು. ಪ್ರಥಮ ವರ್ಷದ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿಜಯ್ ಎಂ.ಎಸ್ ಮಾತನಾಡಿ ಈ ರೀತಿಯ ಕ್ರೀಡಾಕೂಟಗಳು ಕ್ರೀಡಾಭಿಮಾನಿಗಳಿಗೆ ಹೊಸ ಉತ್ಸಾಹ ನೀಡುತ್ತವೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಉತ್ಸಾಹದಿಂದ ನೀಡಲಿದೆ ಎಂದು ಕರೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಚಂದ್ರು. ಎಂ. ಜಿ., ಕೊಡಗು ಜಿಲ್ಲಾ ಮೊಗೇರ ಫುಟ್ಬಾಲ್ ಅಧ್ಯಕ್ಷ, ಅಶೋಕ್. ಎಂ. ಎಂ.ಹಾಗೆಯೆ ಜನಾರ್ಧನ್ ಹೊಸ್ಕೇರಿ, ಪ್ರಕಾಶ್, ನೇತ್ರ ಉಮೇಶ್,ಚಂದ್ರಕಲಾ, ಹರೀಶ್, ಚಂದ್ರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕ್ರೀಡಾ ಕೂಟಕ್ಕೆ ತೀರ್ಪುಗಾರಿಕಯಾಗಿ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್, ಅರುಣ, ಧನುಷ್, ಜೀವನ್, ವಿನು ಕಾರ್ಯನಿರ್ವಹಿಸಿದರೆ, ವೀಕ್ಷಕ ವಿವರಣೆಯನ್ನು ರಮೇಶ್ ಹೆಬ್ಬಟ್ಟಗೇರಿ ನಡೆಸಿಕೊಟ್ಟರೆ, ಸ್ಕೋರರ್ ಆಗಿ ಸಂಜಿತ್ ಹಾಗೂ ಮಂಜು ನಡೆಸಿಕೊಟ್ಟರು. ಕ್ರೀಡಾ ಕೂಟದ ಬಹುಮಾನ ವಿತರಣೆ ಸಂದರ್ಭ ಎಸ್. ಕೆ. ಎಫ್ ಸಿಯ ಆಯೋಜಕರಾದ, ವಿಜಯ್. ಎಂ. ಎಸ್, ದೀಪಕ್, ಚಂಪಕ್, ಸಂಜಿತ್, ಚಂದ್ರ, ವಿಶ್ವನಾಥ್, ಅಜಯ್ ಪಾಲ್ಗೊಂಡಿದ್ದರು.

ವರದಿ : ಅಶೋಕ್_ಮಡಿಕೇರಿ 

Share. Facebook Twitter Pinterest LinkedIn Tumblr Email WhatsApp
Previous Article*ಪಿರಿಯಾಪಟ್ಟಣದಲ್ಲಿ ತಂಬಾಕು ಮಂಡಳಿ ಅಧಿಕಾರಿಗಳ ಸಭೆ : ತಂಬಾಕು ಬೆಳೆಗಾರರಿಗೆ ನ್ಯಾಯಯುತ ದರ ನೀಡಲು ಸಂಸದ ಯದುವೀರ್‌ ಆಗ್ರಹ*
Next Article *ನ.15 ರಂದು ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರ್ ಜಿಲ್ಲಾ ಚೆಸ್ ಪಂದ್ಯಾವಳಿ*

Related Posts

*ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*

February 12, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದ್ದ ಚಿನ್ನದ ದರದಲ್ಲಿ ಇಂದು ಕೊಂಚ…

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.