ಮಡಿಕೇರಿ ನ.14 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ), ಕುಶಾಲನಗರ ತಾಲೂಕು ಕಸಾಪ ಘಟಕ ಹಾಗೂ ಹೆಬ್ಬಾಲೆ ಕಸಾಪ ಹೋಬಳಿ ಘಟಕದ ಸಂಯುಕ್ತಾಶ್ರಯದಲ್ಲಿ ನ.20 ರಂದು ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವರಚಿತ ಕವನವಾಚನ ಕವಿಗೋಷ್ಠಿಯನ್ನು ಏರ್ಪಡಿಲಾಗಿದೆ. ಉದಯೋನ್ಮುಖ ಕವಿಗಳು ಹಾಗೂ ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನ ವಾಚನವನ್ನು ವಾಚಿಸಲು ಆಹ್ವಾನಿಸಲಾಗಿದ್ದು, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಕಾರ್ಯಕ್ರಮವನ್ನು ಹೆಬ್ಬಾಲೆ ಶ್ರೀ ಬನಶಂಕರಿ ಅಮ್ಮನವರ ದೇವಾಲಯದ ಆವರಣದಲ್ಲಿ ಮಧ್ಯಾಹ್ನ 2.30 ರಿಂದ 5 ಗಂಟೆಯವರೆಗೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ ಎನ್.ಎಂ. ಮೂರ್ತಿ ಹಾಗೂ ಕಾರ್ಯದರ್ಶಿಯಾದ ಎಚ್.ಎನ್.ಸುಬ್ರಮಣ್ಯ ಅವರನ್ನು ಸಂಪರ್ಕಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ಅಧ್ಯಕ್ಷರು: ಮೊ:7353732674, ಕಾರ್ಯದರ್ಶಿ ಮೊ:9449334654










