ಮಡಿಕೇರಿ ನ.18 NEWS DESK : ಬೊಟ್ಟಿಯತ್ ನಾಡಿನ ಆರು ಗ್ರಾಮಗಳಾದ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಈಚೂರು, ಅರ್ವತೋಕ್ಲುವಿಗೆ ಸೇರಿದ ಕುಂದಾ ಬೆಟ್ಟದ ಶ್ರೀ ಈಶ್ವರ ದೇವಸ್ಥಾನದಲ್ಲಿ (ಬೊಟ್ಲಪ್ಪ) ಕಾರ್ತಿಕಾ ಸೋಮವಾರದ ಕೊನೆಯ ದಿನವಾದ ಇಂದು ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬದ ತಕ್ಕಾಮೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ದೇವಸ್ಥಾನ ತಕ್ಕಮುಖ್ಯಸ್ಥರು ಸೇರಿದಂತೆ ವಿವಿಧ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಪಾಂಡವರ ಕಾಲದ ಇತಿಹಾಸವಿರುವ ಈ ದೇವಾಲಯವನ್ನು ವನವಾಸದಲ್ಲಿದ್ದ ಪಾಂಡವರೇ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಇಲ್ಲಿ ತೀರ್ಥೋದ್ಭವ ಮರುದಿನ ಕಾವೇರಿ ತೀರ್ಥವನ್ನು ತಂದು ಅಭಿಷೇಕ ಮಾಡುವುದರ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ದೊರೆತರೆ, ನಂತರ ಕಾರ್ತಿಕ ಮಾಸದಲ್ಲಿ ನಾಲ್ಕು ಸೋಮವಾರ ಪೂಜೆ ಹೊರತುಪಡಿಸಿದರೆ ಇಲ್ಲಿ ನಿತ್ಯ ಪೂಜೆಗೆ ಅವಕಾಶ ಇಲ್ಲ. ಕಾರ್ತಿಕ ಮಾಸದಲ್ಲಿ ಕೊನೆಯ ಸೋಮವಾರ ಶ್ರದ್ಧಾಭಕ್ತಿಯಿಂದ ಪೂಜೆ ಹಾಗೂ ಅನ್ನದಾನ ನಡೆಯುತ್ತದೆ.











