ಮಡಿಕೇರಿ ನ.18 NEWS DESK : ಮಕ್ಕಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಪ್ರತಿಷ್ಠಿತ ಸಿಸ್ಕೋ ಕಂಪೆನಿ ಹಾಗೂ ಜಾಗೃತಿ ಸಂಸ್ಥೆ ( NGO) ಸಹಯೋಗದಲ್ಲಿ ಬಾಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಕಲಿಕಾ ಹಾಗೂ ವೈಯುಕ್ತಿಕ ಆರೈಕೆ ಉತ್ಪನ್ನಗಳ ಕಿಟ್ ವಿತರಿಸಲಾಯಿತು. ಬೆಂಗಳೂರಿನ ಜಾಗೃತಿ ಸಂಸ್ಥೆಯು ರಾಜ್ಯಾದ್ಯಂತ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಕುಂದು ಕೊರತೆಗಳಿಗೆ ಸ್ಪಂದಿಸುತ್ತಾ, ಅವರಿಗೆ ಅತ್ಯವಶ್ಯಕ ಇರುವ ವಸ್ತುಗಳನ್ನು ಪೂರೈಸುತ್ತಿದೆ. ಈ ನಿಟ್ಟಿನಲ್ಲಿ ಕೊಡಗಿನ ಅನೇಕ ಶಾಲೆಗಳನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡುತ್ತಿರುವುದಾಗಿ ಸಂಸ್ಥೆಯ ಕಾರ್ಯನಿರ್ವಾಹಕ ಸದಸ್ಯರುಗಳಾದ ನೋಯಲ್ ಹಾಗೂ ಕಣ್ಣನ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಿಸ್ಕೋ ಕಂಪನಿ ಉದ್ಯೋಗಿಗಳಾದ ನಾಗೇಶ್ ಹಾಗೂ ಜಯ, ಸಂಸ್ಥೆಯ ಕಾರ್ಯಕರ್ತರುಗಳು, ಸ್ಥಳೀಯರಾದ ಬಿ.ಟಿ.ದಿನೇಶ್, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ರವಿಕುಮಾರ್ ಬಿ.ಎನ್ ಹಾಗೂ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಉಪಾಧ್ಯಾಯನಿಯರಾದ ರಮ್ಲತ್ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಗೆ ಎಲ್ಲರನ್ನು ವಂದಿಸಿದರು.











