
ಮಡಿಕೇರಿ NEWS DESK ನ.25 : ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂದು ಮದ್ಯಪಾನ ವಿರೋಧಿ ಸಂಘಟನೆಗಳು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ, ಮದ್ಯಪಾನ ವಿರೋಧಿ ಪ್ರತಿಭಟನಾಕಾರರ ನಿಯೋಗದ ಜೊತೆ ಕೂಲಂಕುಷ ಚರ್ಚೆ ನಡೆಸಿದರು. ಅಹವಾಲುಗಳನ್ನು ಆಲಿಸಿ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನಾಕಾರರ ಮನವಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.










