ವಿರಾಜಪೇಟೆ ನ.26 NEWS DESK : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಮೂರ್ನಾಡು ವಲಯದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿಲಾಯಿತು. ಶ್ರೀ ಕೊಡಂಬೂರು ಭದ್ರಕಾಳಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಹಾಗೂ ಅಲಂಕಾರ ಪೂಜೆಯನ್ನು ನಡೆಸಲಾಯಿತು. ಅಲ್ಲದೆ ಪಾಲೆಮಾಡು ಗ್ರಾಮದ ಐದು ಜನ ವೃದ್ಧರಿಗೆ ಒಂದು ತಿಂಗಳಿಗೆ ಆಗುವ ದಿನ ಉಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ನಂತರ ಬಲಮುರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗೂ ಪೆನ್ನು ಗಳನ್ನು ವಿತರಿಸಲಾಯಿತು. ಈ ಸಂದರ್ಭ ಜನಜಾಗೃತಿ ವೇದಿಕೆ ಸದಸ್ಯರಾದ ವಿ. ಎಂ. ಸುಬ್ರಮಣ್ಯ ಮಾತನಾಡಿ, ತಾವು ಕೂಡ ಈ ಶಾಲೆಯ ಹಿಂದಿನ ವಿದ್ಯಾರ್ಥಿಯಾಗಿದ್ದು, ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉತ್ತಮವಾಗಿ ತಮ್ಮ ಶೈಕ್ಷಣಿಕ ಜೀವನ ನಡೆಸಲಿ. ಪೂಜ್ಯರ ಕನಸಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಸ್ಥಾನವನ್ನು ಏರಲಿ ಎಂದು ಶುಭ ಹಾರೈಸಿದರು. ವಲಯದ ಮೇಲ್ವಿಚಾರಕರಾದ ಪ್ರತಾಪ್ ದೇವಾಡಿಗ, ಸಮಾಜ ಸೇವಕಿಯಾದ ಸರೋಜಾ, ಶಾಲ ಶಿಕ್ಷಕರಾದ ದಮಯಂತಿ, ಸುನೀತಾ, ಮಮತಾ, ವಲಯದ ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟದ ಸದಸ್ಯರು ಭಾಗವಹಿಸಿದರು.











