
ಕಣಿವೆ ನ.26 NEWS DESK : ಕೊಡಗು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳೆಯರ ವಿಭಾಗದ ವಿದ್ಯಾರ್ಥಿನಿಯರ ತಂಡ ಪ್ರಥಮ ಬಹುಮಾನ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪಂದ್ಯದ ಉತ್ತಮ ದಾಳಿಗಾರ್ತಿಯಾಗಿ ದಿವ್ಯಾ ಧರ್ಮೇಗೌಡ ಗಮನ ಸೆಳೆದರು. ಪಂದ್ಯದ ಪುರುಷರ ವಿಭಾಗಲ್ಲೂ ದ್ವಿತೀಯ ಬಹುಮಾನ ಗಳಿಸಿದ್ದು, ವಿದ್ಯಾರ್ಥಿ ಹರ್ಷ ಉತ್ತಮ ದಾಳಿಕಾರನಾಗಿ ಗಮನ ಸೆಳೆದಿದ್ದಾನೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಪುಟ್ಟರಾಜು ಪ್ರಶಂಶಿಸಿದ್ದಾರೆ. ತಂಡದ ತರಬೇತುದಾರರಾಗಿ ಡಾ.ಪಿ.ಪಿ. ಜಯಂತಿ ಕಾರ್ಯನಿರ್ವಹಿಸಿದ್ದರು.









