ಸುಂಟಿಕೊಪ್ಪ ನ.27 NEWS DESK : ಕುಡಿಯುವ ನೀರಿನ ವ್ಯತ್ಯಯ, ಆಮೆಗತಿಯ ಜಲಜೀವನ್ ಕಾಮಗಾರಿ, ಕಸ ವಿಲೇವಾರಿ ಘಟಕದ ಅವೈಜ್ಞಾನಿಕ ನಿರ್ಮಾಣದಿಂದ ಕಲುಷಿತಗೊಂಡ ವಾತಾವರಣ, ಆರೋಗ್ಯ ಕೇಂದ್ರ ತುರ್ತು ಪ್ರಾಥಮಿಕ ಚಿಕಿತ್ಸೆ ಆಲಭ್ಯ, ಪಶುವೈಧ್ಯ ಇಲಾಖೆಯಿಂದ ರೈತರಿಗೆ ಸಿಗದೆ ಮನ್ನಣೆ, ಬೀದಿ ನಾಯಿಗಳ ಹಾವಳಿ, ಆಸ್ಸಾಂ ಕಾರ್ಮಿಕರ ಅನಧಿಕೃತ ಆಧಾರಕಾರ್ಡ್ ಬಳಕೆ ಬಗ್ಗೆ ಮಾದಾಪುರ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು. ಮಾದಾಪುರ ಗ್ರಾಮ ಪಂಚಾಯಿತಿ ಗ್ರೇಡ್-1 ರ 2025-26ನೇ ಸಾಲಿನ ವಾರ್ಷಿಕ ಗ್ರಾಮ ಸಭೆಯು ಮಾದಾಪುರ ಸಮುದಾಯ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷ ಮರುವಂಡ ಜಾಲಿ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಕುಡಿಯುವ ನೀರಿನ ಸಮಸ್ಯೆಗೆ ಪಂಚಾಯಿತಿಯಿಂದ ಕ್ರಮ ಕೈಗೊಂಡಿಲ್ಲ. ಕಾರೆಕಾಡು ಜಂಬೂರು ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಜನಸಾಮಾನ್ಯರಿಗೆ ಲಭಿಸುತ್ತಿಲ್ಲ. ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕನಿಷ್ಠ ಗಾಯಗೊಂಡವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗದಲ್ಲಿ ಜನರ ಉಪಯೋಗಕ್ಕಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು. ಬೀದಿ ನಾಯಿಗಳ ಹಾವಳಿಯಿಂದ, ಕೋಳಿ ಕುರಿ ಮಾಂಸದ ಅನುಪಯೋಗಿ ವಸ್ತುಗಳನ್ನು ಅಲ್ಲಲ್ಲಿ ಎಸೆಯುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲಾ ಮಕ್ಕಳು ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ತಂಬುಕುತ್ತೀರ ಗಪ್ಪು, ಮಠದ ಗಣೇಶ, ನಾಸ್ಸಿರ್, ಕಂಠಿ ಹೇಳೀದರು. ಗ್ರಾ.ಪಂ. ಅಧ್ಯಕ್ಷ ಸೋಮಣ್ಣ ಮಾತನಾಡಿ ಕಸ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೊಸಬಡಾವಣೆಯ ಕಸ ವಿಲೇವಾರಿ ಘಟಕದ ಸಮಸ್ಯೆಗೆ ಆತ್ಯಾಧುನಿಕ ಉಪಕರಣ ಶೀಘ್ರದಲ್ಲೇ ಬರಲಿದೆ. ರಸ್ತೆಯ ಬದಿಯಲ್ಲಿ ಕಸ ಎಸೆಯುವುದನ್ನು ಗ್ರಾಮಸ್ಥರು ಕೈ ಬಿಡಬೇಕು. ಗ್ರಾಮ ಪಂಚಾಯಿತಿ ಟ್ರಾಕ್ಟರ್ ಬರುವ ಸಮಯದಲ್ಲಿ ಒಣ ಕಸವನ್ನು ಕಡ್ಡಾಯವಾಗಿ ಹಾಕಬೇಕು. ಮಾರುಕಟ್ಟೆ ಆವರಣದ ಶುಚಿತ್ವವನ್ನು ಕಾಪಾಡಲಾಗಿದೆ. ಪಂಚಾಯಿತಿ ಅಭಿವೃದ್ಧಿ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್‍ಗೆ ರೋಗಿಗಳು ಡಿಸೇಲ್ ಹಾಕಬೇಕಾ..? ಪಶುವೈಧ್ಯ ಇಲಾಖೆಯ ವೈಧ್ಯರು ರಾಸುಗಳ ಚಿಕಿತ್ಸೆಗೆ ಬಂದಾಗ ಲಂಚದ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಆರೋಗ್ಯ ಕೇಂದ್ರದಲ್ಲಿ ಮಾತ್ರೆ ಜೌಷಧಿ ಸಿಗದಿರುವ ಬಗ್ಗೆ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆಯ ಅಧಿಕಾರಿಯವರನ್ನು ಕರೆಯಿಸಿ ಜನಸಾಮಾನ್ಯರಿಗೆ ಆರೋಗ್ಯ ಚಿಕಿತ್ಸೆ ಲಭಿಸದೆ ಇರುವ ಬಗ್ಗೆ ಚರ್ಚೆ ನಡೆಸಬೇಕು ಎಂದು ಕಂಠಿ, ಭವಿನ್, ನಾಸೀರ್, ಸಚ್ಚಿಕಾಳಪ್ಪ ಅಸಮಧಾನ ವ್ಯಕ್ತಪಡಿಸಿದರದು. ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟದಿದ್ದರೆ ಸಾರ್ವಜನಿಕರು ರಸ್ತೆಗೆ ಬಂದು ಹೋರಾಡಲಿದ್ದಾರೆ. ಆಸ್ಸಾಂ ಕಾರ್ಮಿಕರಿಗೆ ಕರ್ನಾಟಕ ಆಧಾರ್ ಕಾರ್ಡ್ ನಿರ್ಮಿಸಿಕೊಡುವವರು, ಸಂತೆಯಲ್ಲಿ ಆಸ್ಸಾಂ ಕಾರ್ಮಿಕರು ಅಂಗಡಿ ಹಾಕುವುದನ್ನು ಗ್ರಾ.ಪಂ. ಹಾಗೂ ತೋಟದ ಮಾಲೀಕರು ಅವಕಾಶ ಕಲ್ಪಿಸಿದರೆ ಕೊಡಗಿನಲ್ಲಿ ಬಾರಿ ಅನಾಹುತ ಸಂಭವಿಸಲಿದೆ ಎಂದು ಮಾಜಿ ಸೈನಿಕ ತಂಬುಕುತ್ತೀರ ಗಪ್ಪು ಅತಂಕ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ರವಿ ಕೃಷ್ಣನ್ ನಾಯರ್ ಮಾತನಾಡಿ, ಜಂಬೂರು ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯ ಕಸವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲಾಗುವುದು. 3 ಸಿಸಿ ಕ್ಯಾಮರವನ್ನು ಅಳವಡಿಸಲಾಗುವುದು. ಈಗಾಗಲೇ ಕಸ ಘಟಕದಲ್ಲಿದ್ದ 500 ಲೋಡ್ ಕಸವನ್ನು ತೆರವುಗೊಳಿಸುವ ಕಾರ್ಯಪ್ರಗತಿಯಲ್ಲಿದೆ. ಬೀದಿನಾಯಿ ಹಾವಳಿ ಜಿಲ್ಲಾಡಳಿತ ಸುಪ್ರಿಂಕೋರ್ಟಿನ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿಯೂ ಕೆಲವು ಸೂಚನೆಗಳು ಜಿಲ್ಲಾಡಳಿತದಿಂದ ಬಂದಿದ್ದು ಹಂತ ಹಂತವಾಗಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲಾಗುವುದು. ನೀರಿನ ಟ್ಯಾಂಕರ್ ಕಾರ್ಯ ಮುಂದುವರೆದಿದ್ದು, ಗ್ರಾಮ ಸ್ವಚ್ಚತೆ ಆದ್ಯತೆ ಕೆಲಸ ಕಾರ್ಯ ಮುಂದುವರೆದಿದೆ ಎಂದು ಹೇಳೀದರು. ಮಾದಾಪುರ ಸರಕಾರಿ ಪ್ರೌಢಶಾಲೆಯ ಮೈದಾನದ ಒತ್ತಿನಲ್ಲಿರುವ ಸಭಾಂಗಣದಲ್ಲಿ ರಾತ್ರಿ ವೇಳೆ ಆಕ್ರಮ ಚಟುವಟಿಕೆಯ ನಡೆಯುತ್ತಿದೆ ಶಾಲೆಗೆ ಸೂಕ್ತ ಬೇಲಿ ವ್ಯವಸ್ಥೆ ಖಾಲಿ ಜಾಗದಲ್ಲಿ ಮರ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಸಂಬಂಧಿಸಿದ ಇಲಾಖೆಯಿಂದ ಆಗಬೇಕಿದೆ ಆಕ್ರಮ ಚಟುವಟಿಕೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಶಾಲೆಯ ಮುಖ್ಯಶಿಕ್ಷಕ ಭರತ್ ಸಭೆಗೆ ತಿಳಿಸಿದರು. ಕುಡಿಯುವ ನೀರು ನೈರ್ಮಲ್ಯಕರಣ ಸಹಾಯಕ ಅಭಿಯಂತರ ವಿರೇಂದ್ರಕುಮಾರ್, ಪಶುವೈಧ್ಯ ಇಲಾಖೆಯ ಡಾ.ಅಮರ್, ಮಕ್ಕಳ ಕಲ್ಯಾಣ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಿ, ಚೆಸ್ಕಾಂ ಕಿರಿಯ ಅಭಿಯಂತರ ನಿರಂಜನ್, ಕಂದಾಯ ಗ್ರಾಮಲೆಕ್ಕಾಧಿಕಾರಿ ದೀಪಿಕಾ, ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದರ್ಶನ್, ತಾಲೂಕು ಪಂಚಾಯಿತಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿ ಅರುಣ್‍ಕುಮಾರ್,ಸಾಮಾಜಿಕ ಅರಣ್ಯ ಇಲಾಖೆಯ ಪಿ.ಎಲ್.ಶಿಥಲ್, ವಲಂiÀi ಅರಣ್ಯಾಧಿಕಾರಿ ಉಲ್ಲಾಸ್, ಎ.ಎಸ್.ಐ ಮಂಜುನಾಥ್, ತೋಟಗಾರಿಕ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶ ವಿರಣ್ಣ, ಗ್ರಾ.ಪಂ.ಉಪಾಧ್ಯಕ್ಷ ಸುರೇಶ್‍ಬಾವೆ, ಸದಸ್ಯರುಗಳಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ಕೆ.ಸಿ.ಶೀಲಾ, ಮಾನಸ, ನಿರೂಪ, ಮನುಬಿದ್ದಪ್ಪ, ಗಿರೀಶ ಹಾಗೂ ಲೆಕ್ಕಾಧಿಕಾರಿ ಅನಿತಾ ಇದ್ದರು.











