ಮಡಿಕೇರಿ ಡಿ.5 NEWS DESK : ಹಲವು ಕಾರಣಗಳಿಂದ ನಮ್ಮ ಆಚಾರ ವಿಚಾರಗಳಿಂದ ದೂರ ಉಳಿದಿರುವ ಇಂದಿನ ಯುವ ಪೀಳಿಗೆ ಕೊಡವ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮುಂದೆ ಬರಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದರು. ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕೊಡವ ಒಕ್ಕಡೊಕ್ಕಡ 5ನೇ ವರ್ಷದ ಚೀಯಕ್‍ಪೂವಂಡ ಕೇರ್ಬಲಿ ನಮ್ಮೆ – 2025ರ ಲೋಗೋವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಜನಾಂಗದ ಸಂಸ್ಕೃತಿ ಹಾಗೂ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಹಾಗೂ ಅದರ ಏಳಿಗೆಗೆ ತುಂಬಾ ಸಹಕಾರಿಯಾಗಿದೆ. ಹಲವು ಕಾರಣಗಳಿಂದ ನಮ್ಮ ಆಚಾರ ವಿಚಾರಗಳಿಂದ ದೂರ ಉಳಿದಿರುವ ಇಂದಿನ ಯುವಜನತೆ ಇಂತಹ ಕಾರ್ಯಕ್ರಮಗಳಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಸುಜಾ ಕುಶಾಲಪ್ಪ, ಕೊಡಗು ಜಿಲ್ಲಾ ವರಿಷ್ಠಧಿಕಾರಿ ರಾಮರಾಜನ್, ಚೀಯಕ್‌ಪೂವಂಡ ಕುಟುಂಬದ ಅಧ್ಯಕ್ಷರು ಎಂ.ಅಪ್ಪಚ್ಚು, ಮುಂಡಂಡ ಸಿ.ನಾಣಯ್ಯ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರು ಮುದಂಡ ಪಿ ನಾಣಯ್ಯ, ಅಧ್ಯಕ್ಷ, ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಅಧ್ಯಕ್ಷರು ಪೊನ್ನೋಲತಂಡ ಕಿರಣ್ ಪೊನ್ನಪ್ಪ, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ಕುಶಾಲಪ್ಪ, ಪಂಚಾಯಿತಿ ಸದಸ್ಯರು ಅರುಣ್ ಬೇಬ, ಸುರೇಶ್, ಕೇರ್‌ಬಲಿ ನಮ್ಮೆ ಸಮಿತಿಯ ಚೀಯಕ್‌ಪೂವಂಡ ಅಧ್ಯಕ್ಷರು ಬೋಪಣ್ಣ, ಉಪಾಧ್ಯಕ್ಷರು, ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.












