ಮಡಿಕೇರಿ ಡಿ.6 NEWS DESK : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಘಟಕ ಹಾಗೂ ಸಂತ ಅನ್ನಮ್ಮ ದೇವಾಲಯದ ಸಹಯೋಗದಲ್ಲಿ ಡಿ.7 ರಂದು ಕ್ರಿಸ್ಮಸ್ ಗಾನ ತರಂಗ ಜಿಲ್ಲಾ ಮಟ್ಟದ ಗಾಯನ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ಮೂರನೇ ವರ್ಷದ ಸ್ಪರ್ಧೆ ನಡೆಯಲಿದ್ದು, ವಿರಾಜಪೇಟೆ ವಲಯ ಶ್ರೇಷ್ಠ ಗುರು ಫಾ.ಜೇಮ್ಸ್ ಡೊಮೆನಿಕ್ ಧ್ವಜಾರೋಹಣ ಹಾಗೂ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರೆ.ಡಾ.ಫ್ರಾನ್ಸೀಸ್ ಸೆರಾವೋ ಎಸ್.ಜೆ. ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯೇಶನ್‍ನ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಅಂತೋಣಿ ರಾಬಿನ್ ವಹಿಸಲಿದ್ದು, ವಿರಾಜಪೇಟೆ ಶ್ರೇಷ್ಠ ಗುರು, ಸ್ಪರ್ಧೆಯ ಪ್ರಧಾನ ಪೋಷಕ ಫಾ.ಜೇಮ್ಸ್ ಡೊಮೆನಿಕ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯೇಶನ್‍ನ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಪೋಷಕರಾಗಿ ಎಂ.ಡಿ.ಅರಾಟ್ ಗ್ರೂಪ್‍ನ ಟೋನಿ ವಿನ್ಸೆಂಟ್, ವಿಶೇಷ ಆಹ್ವಾನಿತರಾಗಿ ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಡಿ.ಕೆ.ಬ್ರಿಜೇಶ್, ಬೆಂಗಳೂರು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಣಕಾಸಿನ ನಿರ್ದೇಶಕರಾದ ಫಾ.ಎ.ಜೆ.ಟೋನಿ, ವಿರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಕಾರ್ಯಕ್ರಮ ಸಹ ಪ್ರಾಯೋಜಕ ಭಾರತ ವಲಯ ಸಮುದಾಯ ಸೇವಾ ಅಧ್ಯಕ್ಷ ಮೈಮ್ ದಿನೇಶ್ ಮತಿಯಾಸ್ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಡಿಕೇರಿ ವಲಯ ಶ್ರೇಷ್ಠ ಗುರು ಫಾ.ಜಾರ್ಜ್ ದೀಪಕ್, ದಕ್ಷಿಣ ಮಧ್ಯ ಭಾರತ ವಲಯ ನಿರ್ದೇಶಕ ಮೈಮ್ ಮ್ಯಾಥ್ಯೂ ಕುರಿಯನ್, ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ.ಮದಲೈ ಮುತ್ತು, ಪೊನ್ನಂಪೇಟೆ ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ.ಮ್ಯಾನುವೆಲ್ ಡಿ’ಸೋಜ, ಗೋಣಿಕೊಪ್ಪ ಸಂತ ತೋಮಸ್ ಶಾಲೆ ಪ್ರಾಂಶುಪಾಲ ಫಾ.ಆಂಟೋನಿ ಪಯಾಂಪಳ್ಳಿ, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಸಹಾಯಕ ಗುರು ಫಾ.ಅಭಿಲಾಶ್ ಜಾರ್ಜ್, ಕೆದಮುಳ್ಳೂರು ಫಾತಿಮಾ ಮಾತಾ ದೇವಾಲಯ ಧರ್ಮಗುರು ಫಾ.ವಿಲ್‍ಫ್ರೆಡ್ ಎ, ಕೂಡಿಗೆ ಪವಿತ್ರ ಕುಟುಂಬ ದೇವಾಲಯ ಧರ್ಮಗುರು ಫಾ.ಚಾಲ್ರ್ಸ್ ನೊರೋನ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯೇಶನ್ ಕಾರ್ಯಾಧ್ಯಕ್ಷ ಲಾರೆನ್ಸ್ ವಿ.ಎ., ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್ ಪಾಲ್ಗೊಳ್ಳಲಿದ್ದಾರೆ. ಸೌತ್ ಕೊಡಗು ಕ್ರಿಶ್ಚಿಯನ್ ಅಸೋಶಿಯೇಶನ್ ಅಧ್ಯಕ್ಷ ಎ.ಜೆ.ಬಾಬು, ಕೊಡಗು ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಬೇಬಿ ಮ್ಯಾಥ್ಯೂ, ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್, ವಿರಾಜಪೇಟೆ ಸೆಂಟ್ ಜೋಸೇಫ್ ಕಾನ್ವೆಂಟ್ ಸಿಸ್ಟರ್ ರೋಸಿ ಡಿ’ಸ, ಪಾಲಿಬೆಟ್ಟ ಲೂರ್ದು ಮಾತೆ ಕಾನ್ವೆಂಟ್ ಸಿಸ್ಟರ್ ತೆರೇಸಾ ಆ್ಯನ್, ಸಂತ ಅನ್ನಮ್ಮ ದೇವಾಲಯ ಪಾಲನಾ ಸಮಿತಿ ಕಾರ್ಯದರ್ಶಿ ಆಂಟೋನಿ ಆಲ್ವಾರೀಸ್ ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಲಿದ್ದು, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಅಂತೋಣಿ ರಾಬಿನ್ ಉಪಸ್ಥಿತರಿರಲಿದ್ದಾರೆ. ಗೌರವ ಅತಿಥಿಗಳಾಗಿ ವಿರಾಜಪೇಟೆ ವಲಯ ಶ್ರೇಷ್ಠ ಗುರು ಫಾ.ಜೆಮ್ಸ್ ಡೊಮೆನಿಕ್, ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಫಾ.ಮದಲೈ ಮುತ್ತು, ರಾಜ್ಯ ಕಾಂಗ್ರೆಸ್ ಸೇವಾದಳ ಕಾರ್ಯದರ್ಶಿ ತೆರೇಸಾ ವಿಕ್ಟರ್, ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್ ಪಿ.ವಿ, ಉದ್ಯಮಿಗಳಾದ ಪೌಲ್ ಕ್ಷೇವಿಯರ್, ಜಾರ್ಜ್ ರಾಮಪುರಂ, ಚೋಪಿ ಜೋಸೆಫ್, ಮಾರ್ಟಿನ್ ಬರ್ನಾಡ್, ಆಲ್ವಿನ್ ಡಿಸೋಜ, ವಿ.ಎಸ್.ಸಜಿ, ಎನ್.ಟಿ.ಜೋಸೆಫ್, ನಿವೃತ್ತ ಉಪನಿರ್ದೇಶಕರಾದ ಪೆಲಿಗ್ರಿನ್ ಮಚ್ಚಾಡೋ, ವಿರಾಜಪೇಟೆ ಪುರಸಭೆ ಸದಸ್ಯ ಬೆನ್ನಿ ಅಗಸ್ಟಿನ್, ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ ಕಾರ್ಯದರ್ಶಿ ಅಂತೋಣಿ ಡಿಸೋಜ, ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್, ಕಾರ್ಯಾಧ್ಯಕ್ಷ ಲಾರೆನ್ಸ್ ವಿ.ಎ., ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ, ಯುವ ಘಟಕದ ಅಧ್ಯಕ್ಷ ಕೆವಿನ್ ಶಾಲೂಮೊನ್, ಗೌರವಾಧ್ಯಕ್ಷ ಜೋಕಿಂ ವಾಸ್, ನಿಕಟ ಪೂರ್ವ ಅಧ್ಯಕ್ಷ ಎಸ್.ಎಂ.ಡಿ’ಸಿಲ್ವ, ಮಹಿಳಾ ಘಟಕದ ಅಧ್ಯಕ್ಷೆ ಫಿಲೋಮಿನಾ ಜೆ, ಪ.ಪೂ.ಕಾಲೇಜುಗಳ ಉಪನ್ಯಾಸಕರ ಸಂಘದ ಫಿಲಿಪ್ ವಾಸ್ ಭಾಗವಹಿಸಲಿದ್ದಾರೆ ಎಂದು ಜಾನ್ಸನ್ ಪಿಂಟೋ ತಿಳಿಸಿದರು. ಸ್ಪರ್ಧೆಯಲ್ಲಿ ಒಂದು ಧರ್ಮಕೇಂದ್ರದಿಂದ ಹಾಗೂ ಒಂದು ವಿದ್ಯಾಕೇಂದ್ರದಿಂದ ಒಂದು ತಂಡಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕನಿಷ್ಠ 5 ಸದಸ್ಯರು ಗರಿಷ್ಠ 20 ಸದಸ್ಯರು ಇರಬೇಕು. ವಿಜೇತರಿಗೆ ಪ್ರಥಮ ರೂ.20,000, ದ್ವಿತೀಯ 15,000 ಹಾಗೂ ತೃತೀಯ ರೂ.10,000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದೆಂದರು. ಚಿತ್ರಕಲೆ ಸ್ಪರ್ಧೆ ಎರಡು ವಿಭಾಗಗಳಿದ್ದು, ಸ್ಪರ್ಧಿಗಳು ತಮ್ಮ ಸ್ವಂತ ಧರ್ಮಕೇಂದ್ರ ಅಥವಾ ಶಿಕ್ಷಣ ಸಂಸ್ಥೆಗೆ ಮಾತ್ರವೇ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ವಿಜೇತರಾದವರಿಗೆ ಪ್ರಥಮ ರೂ.3,000, ದ್ವಿತೀಯ 2,000 ಹಾಗೂ ತೃತೀಯ 1,000 ನಗದು ಹಾಗೂ ಟ್ರೋಫಿ ವಿತರಿಸಲಾಗುದೆಂದು ತಿಳಿಸಿದರು. ಸ್ಪರ್ಧೆಯಲ್ಲಿ 20ಕ್ಕಿಂತ ಹೆಚ್ಚಿನ ತಂಡಗಳು ಸ್ಪರ್ಧಿಸಲಿದ್ದು, ಜಿಲ್ಲೆಯ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಾನ್ಸನ್ ಪಿಂಟೋ ಮನವಿ ಮಾಡಿದರು. ಅಸೋಸಿಯೇಶನ್ ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್ ಮಾತನಾಡಿ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಕ್ರಿಶ್ಚಿಯನ್ ಡೆವಲಪ್ಮೆಂಟ್ ಬೋರ್ಡ್ (ಸಿಡಿಸಿ) ನಲ್ಲಿ ದೊರಕುವ ಯೋಜನೆಗಳ ಬಗ್ಗೆ ಸಮುದಾಯ ಬಾಂಧವರಿಗೆ ಅರಿವು ಮೂಡಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಕಾರ್ಯದರ್ಶಿ ಆಂಟೋಣಿ ಡಿ’ಸೋಜ, ಉಪಾಧ್ಯಕ್ಷ ಜೋಕಿಂ ರಾಡಿಗಸ್, ಖಜಾಂಚಿ ಜೇಮ್ಸ್ ಡಿ’ಸೋಜಾ, ಸಂಘಟನಾ ಕಾರ್ಯದರ್ಶಿ ಮರ್ವೀನ್ ಲೋಬೋ ಉಪಸ್ಥಿತರಿದ್ದರು.











