ಚೆಟ್ಟಳ್ಳಿ ಡಿ.10 NEWS DESK : ಮಡಿಕೇರಿ ಸಮೀಪದ ಕಡಗದಾಳುವಿನ ಕುರುಳಿ ಅಂಬಲ ಮಂದ್ ನಲ್ಲಿ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ನಡೆಯಿತು. ಊರಿನವರು ಮಂದ್ ನಲ್ಲಿ ಸೇರಿ ಊರ್ ತಕ್ಕರ ಮನೆಗೆ ತೆರಳಿ ಫಲಹಾರ ಊಟೋಪಚಾರದ ನಂತರ ತಳಿಯಕ್ಕಿ ಬೊಳ್ ಚ ದುಡಿಕೊಟ್ಟ್ ಪಾಟ್ ಒಡ್ಡೋಲಗದೊಂದಿಗೆ ಊರ್ ತಕ್ಕರನ್ನು ಮಂದ್ ಗೆ ಕರೆತರಲಾಯಿತು. ನಂತರ ಊರ್ ಕೋಲ್ ನಡೆಯಿತು. ದೇಶ ತಕ್ಕರನ್ನು ಹಾಗೂ ನಾಡು ತಕ್ಕರಾದ ಪಾಂಡಿರ ಕುಟುಂಬಸ್ಥರನ್ನು ಮಂದ್ ಗೆ ಕರೆತಂದು ಸತ್ಕರಿಸಲಾಯಿತು. ಮೂಲನೆಲೆಯಲ್ಲಿ ದೇವರನ್ನು ಪ್ರಾರ್ಥಿಸಿ ನಾಡ್ ಕೋಲ್ , ಬಾಳೋಪಾಟ್, ಬೊಳಕಾಟ್ ಪರೆಯ ಕಳಿ, ವಾಲಗತಾಟ್ ನಡೆಯಿತು. ಫಲಹಾರದ ನಂತರ ದುಡಿಕೊಟ್ ಪಾಟ್, ಒಡ್ಡೋಲಗದೊಂದಿಗೆ ಊರುತಕ್ಕರನ್ನು ತಕ್ಕರ ಮನೆಗೆ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಮಂದ್ ಸಮಿತಿಯ ಅಧ್ಯಕ್ಷರಾದ ಮಾದೇಟಿರ ಬೆಳ್ಯಪ್ಪ, ಊರಿನ ತಕ್ಕರಾದ ಕೊರವಂಡ ರಾಮು ಅಯ್ಯಪ್ಪ, ಏಳು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಊರಿನ ಹಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದರು. ಡಿ.10 (ಇಂದು) ಮಹಾ ವಿಷ್ಣು ಪೂಜೆ ಸಲ್ಲಿಸಿ, ಸಂಜೆ ಮಂದ್ ನಲ್ಲಿ ದೇವ ಕೋಲನ್ನು ಒಪ್ಪಿಸಲಾಗುವುದು.
ವರದಿ : ಕರುಣ್ ಕಾಳಯ್ಯ











