ನಾಪೋಕ್ಲು ಡಿ.13 NEWS DESK : ಫೇಸ್ ಎಕ್ಸ್ ಶಾಲಾ ಆಯೋಜಕತ್ವದಲ್ಲಿ ಕೇರಳದ ಕ್ಯಾಲಿಕೆಟ್‍ನಲ್ಲಿ ನಡೆದ ಟಾಕ್ ಶೋನಲ್ಲಿ ಭಾಗವಹಿಸಿ ಕೊಡಗಿನ ಹನ್ನತ್ ಬೀ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಜ್ಯ ಮಟ್ಟದ ಸ್ಪರ್ಧೆ ಕೇರಳದ ಕೋಝಿಕೋಡ್ ನಲ್ಲಿ ನಡೆಯಲಿದೆ ಇದರ ಅಂತಿಮ ಸುತ್ತು ಯುಎಇ ಯ ದುಬೈನಲ್ಲಿ ನಡೆಯಲಿದ್ದು ಪ್ರಶಸ್ತಿ ಪತ್ರ ಹಾಗೂ ಹತ್ತು ಲಕ್ಷದ ನಗದು ಬಹುಮಾನ ಇರಲಿದೆ. ಹನ್ನತ್ ಬಿ ಕಕ್ಕಬ್ಬೆ ಗ್ರಾಮ ಪಂಚಾಯತಿಯ ಕುಂಜಿಲದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಆಗಿದ್ದು, ಕುಂಜಿಲದ ಅಜೀಜ್ ಮಾಸ್ಟರ್ ಹಾಗೂ ಸುಮಯ್ಯ ದಂಪತಿಗಳ ಪುತ್ರಿ.
ವರದಿ : ದುಗ್ಗಳ ಸದಾನಂದ.











