ವಿರಾಜಪೇಟೆ ಡಿ.13 NEWS DESK : ವಿರಾಜಪೇಟೆಯ ಕೊಡವ ಸಮಾಜದಲ್ಲಿ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಪುತ್ತರಿ ನಮ್ಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಪುತ್ತರಿ ಹಬ್ಬ ಒಂದಾಗಿದ್ದು, ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಸಡಗರದಿಂದ ಪುತ್ತರಿ ನಮ್ಮೆಯನ್ನು ಆಚರಿಸಲಾಗಿದೆ. ಸದಸ್ಯರೆಲ್ಲರೂ ಅತಿ ಉತ್ಸಾಹದಿಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ. ದೇಶಿ ಸಂಸ್ಕೃತಿಯನ್ನು ಮರೆಯದೆ ಅದನ್ನು ಗೌರವಿಸುವುದರ ಮೂಲಕ ಮುಂದುವರಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಎಂದರು. ಮುಂದಿನ ದಿನಗಳಲ್ಲಿ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ನೀಲಕ್ಕ ತಂಡದ ನಾಯಕಿ ಐಚೆಟ್ಟಿರ ಮೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕುಂಜಿರ ಚಿತ್ರ ಹಾಗೂ ತಾತಂಡ ಏಸು ಕಬೀರ್ ವರದಿ ವಾಚಿಸಿದರು. ಕುಪ್ಪಚ್ಚಿರ ಕವಿತಾ ಭೀಮಯ್ಯ ಸ್ವಾಗತಿಸಿದರು, ಅಪ್ಪುಮಣಿಯಂಡ ಡೈಜಿ ಸೋಮಣ್ಣ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಪುತ್ತರಿ ನಮ್ಮೆಯ ವಿಶೇಷವಾಗಿ ಭೋಜನ ವ್ಯವಸ್ಥೆಯನ್ನು ಎಲ್ಲರಿಗೂ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊಡವ ಪೊಮ್ಮಕ್ಕಡ ಒಕ್ಕೂಟದ ನೀಲಕ್ಕ ತಂಡದ ಸದಸ್ಯರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್ಲಾ ಸದಸ್ಯರಿಗೂ ಪುತ್ತರಿ ನಮ್ಮೆ ಕುರಿತು ಭಾಷಣ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಮಾಚಪಂಡ ತುಳಸಿ ಕುಶಾಲಪ್ಪ ಪ್ರಥಮ, ಕಾಣತಂಡ ಬೀನಾ ಜಗದೀಶ್ ದ್ವಿತೀಯ, ಕುಲ್ಲೆಟ್ಟಿರ ಹೇಮ ತೃತೀಯ ಹಾಗೂ ಚೇಂದಂಡ ಸಬಿತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು. ಒಕ್ಕೂಟದ ಜಂಟಿ ಕಾರ್ಯದರ್ಶಿ ಮೂಕೊಂಡ ಪ್ರೀತ್ ಈರಪ್ಪ ಪ್ರಾಯೋಜಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಚೋಕಂಡ ಈಶ್ವರಿ ಮತ್ತು ತಂಡದವರಿಂದ ಸ್ವಾಗತ ನೃತ್ಯ ನಡೆಯಿತು.











