ಮಡಿಕೇರಿ ಡಿ.13 NEWS DESK : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾಪ್ರತಿಭೋತ್ಸವ ಸ್ಪರ್ಧೆಗಳು ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆ, ಸಮೂಹ ಸ್ಪರ್ಧೆಗಳು ಇತ್ತೀಚೆಗೆ ನಗರದ ಗಾಂಧಿ ಭವನದಲ್ಲಿ ನಡೆಸಲಾಗಿತ್ತು. ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಡಿ.22 ರಂದು ಮೈಸೂರಿನ ಕಲಾಮಂದಿರದಲ್ಲಿರುವ ರಂಗಾಯಣದ ಆವರಣದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಜೇತರ ವಿವರ ಇಂತಿದೆ. ಕರ್ನಾಟಕ/ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ ಅಪೇಕ್ಷ ಆರ್.ರೈ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ ತಂದೆ ರಾಧಕೃಷ್ಣ ರೈ, ಶ್ರೀ ಗಜಾನನ ಸ್ಟೋರ್ಸ್, ಮಲ್ಲಿಕಾರ್ಜುನ ನಗರ, ಮಡಿಕೇರಿ ಕೊಡಗು ಜಿಲ್ಲೆ. ದೂ.ಸಂ. 9480646175. ಶಾಸ್ತ್ರೀಯ ನೃತ್ಯ (ಭರತನಾಟ್ಯ)ದಲ್ಲಿ ಪ್ರಥಮ ಸ್ಥಾನ ಆವಂತಿಕ ಟಿ.ಯು., ಸಂತ ಅನ್ನಮ್ಮ ಪ್ರೌಢ ಶಾಲೆ, ವಿರಾಜಪೇಟೆ ತಂದೆ ಉಮೇಶ್ ಟಿ.ವಿ., ಎಫ್‍ಎಂಸಿ ಕಾಲೇಜು ರಸ್ತೆ, ಸರಸ್ವತಿ ಸ್ಟೋರ್ಸ್ ಹಿಂಭಾಗ, ವಿರಾಜಪೇಟೆ, ಕೊಡಗು ಜಿಲ್ಲೆ. ದೂ.ಸಂ. 9900481077. ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಲಿಶ್ಮಾ ಕೆ.ಕೆ., ಉದಯ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಗೇರಿ, ತಂದೆ ಕೆಕ್ಕಡ ಪೂವಯ್ಯ ಕೃಷ್ಣ, ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ಮುಂಭಾಗ, ಚೇರಂಬಾಣೆ, ಮಡಿಕೇರಿ ತಾ. ಕೊಡಗು ಜಿಲ್ಲೆ ದೂ.ಸಂ. 9448266611. ಸುಗಮ ಸಂಗೀತದಲ್ಲಿ ಪ್ರಥಮ ಸ್ಥಾನ ಅಂಜಲಿನ ಮರಿಯಾ, ಸಂತ ಮೈಕಲರ ಶಾಲೆ, ಮಡಿಕೇರಿ ತಂದೆ ವಿನ್‍ಸೆಂಟ್ ಕೌಸಸಿ, ಮಕ್ಕಂದೂರು, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ. ದೂ.ಸಂ. 8904827232. ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಅರ್ಣವ್ ವಿ., ಕಾವೇರಿ ಪ್ರೌಢ ಶಾಲೆ, ವಿರಾಜಪೇಟೆ, ಕೇರಾಪ್ ವಿನೋದ್ ಕುಮಾರ್ ಆರ್., ಚಾಮುಂಡಿ ಲೇಔಟ್, ಕಾವೇರಿ ಕಾಲೇಜು ಮುಂಭಾಗ, ವಿರಾಜಪೇಟೆ-571218. ದೂ.ಸಂ. 8105421366.










