Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾರತದ ಆರ್ಥಿಕತೆಗೆ ಯುದ್ಧದ ‘ಶಾಕ್’:ರೂಪಾಯಿ ಮೌಲ್ಯ ಪಾತಾಳಕ್ಕೆ,ಸಾರಿಗೆ ವೆಚ್ಚ ದುಬಾರಿ!*
  • *ಕೆ.ನಿಡುಗಣೆ ಗ್ರಾ.ಪಂ.ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಶಾಸಕರ ಸೂಚನೆ*
  • *ಯುದ್ಧ ಪರಿಸ್ಥಿತಿ : HELPLINE ಸಂಖ್ಯೆಗಳು ಇಲ್ಲಿವೆ*
  • *ಮಾ.03 ರಂದು ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ದೇವಾಲಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಾಸ*
  • *ಮಾ.06 ರಂದು ಮಿನಿ ಉದ್ಯೋಗ ಮೇಳ*
  • *ಚೆನ್ನಯ್ಯನಕೋಟೆ ಮತ್ತು ಕಣ್ಣಂಗಾಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ*
  • *ಮಡಿಕೇರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*
  • *ಭಾರತಕ್ಕೆ ಮುಟ್ಟಿದ ಯುದ್ಧದ ಬಿಸಿ: ಒಮನ್ ದಾಳಿಯಲ್ಲಿ ಕನ್ನಡಿಗರು ಇದ್ದಾರೆಯೇ? ಮೃತ ಭಾರತೀಯನ ಗುರುತು ಪತ್ತೆಗೆ ವಿದೇಶಾಂಗ ಇಲಾಖೆ ಕಾರ್ಯತತ್ಪರ*
  • *ಮಿತ್ರ ರಾಷ್ಟ್ರದ ಮೇಲೆ ಮಿತ್ರನಿಂದಲೇ ಅಟ್ಯಾಕ್: ಅಮೆರಿಕದ 3 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಕುವೈತ್; ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು!*
  • *ಕಾವೇರಿ ನದಿ ಅಳಿದರೆ ಸಂಸ್ಕೃತಿಯೇ ಅಳಿದಂತೆ; ಕಣಿವೆ ಆರತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರದಲ್ಲಿ ಅರೆಭಾಷೆ ದಿನಾಚರಣೆ : ಸಮುದಾಯದ ಪ್ರತಿಯೊಬ್ಬರು ಮಾತೃಭಾಷೆಗೆ ಆದ್ಯತೆ ನೀಡಿ : ಸದಾನಂದ ಮಾವಜಿ*
ಇತ್ತೀಚಿನ ಸುದ್ದಿಗಳು

*ಕುಶಾಲನಗರದಲ್ಲಿ ಅರೆಭಾಷೆ ದಿನಾಚರಣೆ : ಸಮುದಾಯದ ಪ್ರತಿಯೊಬ್ಬರು ಮಾತೃಭಾಷೆಗೆ ಆದ್ಯತೆ ನೀಡಿ : ಸದಾನಂದ ಮಾವಜಿ*

ಡಿಸೆಂಬರ್ 16, 20252 Mins Read
Facebook WhatsApp Twitter Telegram Copy Link Threads Email LinkedIn Pinterest
Follow us on Google News
Google News
Facebook Twitter WhatsApp Email Telegram Copy Link

ಕುಶಾಲನಗರ ಡಿ.16 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ಭಾಷಾ ಅಭಿವೃದ್ಧಿಯೊಂದಿಗೆ ಅನ್ಯಭಾಷಿಕರಿಗೆ ಅರೆ ಭಾಷೆಯನ್ನು ಕಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ತಿಳಿಸಿದ್ದಾರೆ. ಕುಶಾಲನಗರದ ರೈತ ಸಹಕಾರ ಭವನ ಸಭಾಂಗಣದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅದರ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಅರೆಭಾಷೆ ದಿನಾಚರಣೆ -2025 ಮತ್ತು ಅರೆ ಭಾಷೆ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಕಾಡೆಮಿ ಮೂಲಕ ಸಂಸ್ಕೃತಿ ಸಾಹಿತ್ಯ ಸಂಶೋಧನೆ ಕಾರ್ಯಕ್ರಮ ಚಟುವಟಿಕೆಗಳು ನಿರಂತರ ನಡೆಯುತ್ತಿವೆ. ಸಮುದಾಯದ ಪ್ರತಿಯೊಬ್ಬರು ಮಾತೃಭಾಷೆಗೆ ಆದ್ಯತೆ ನೀಡಬೇಕು. ಯುವ ಜನಾಂಗ ಭಾಷಾಜ್ಞಾನ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಗೌಡ ಸಮಾಜ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಸೂದನ ಎಸ್ ಗೋಪಾಲ್, ವ್ಯಾಪ್ತಿಗಳು ಬದಲಾದಂತೆ ಭಾಷೆ ಬದಲಾಗುತ್ತವೆ. ಭಾಷೆ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ, ಅರೆ ಭಾಷೆಗೆ ತನ್ನದೇ ಆದ ಸ್ವಂತಿಕೆ ಇದೆ. ಭಾಷೆ ಸಂಸ್ಕಾರ ಆಚಾರ ವಿಚಾರವನ್ನು ಹೇಳಿಕೊಡುತ್ತದೆ, ಭಾಷೆ ನಾಶವಾದಲ್ಲಿ ಸಂಸ್ಕೃತಿ ನಾಶ ಖಚಿತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಭಾಷೆ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ. ನಿರಂತರ ಬಳಕೆ ಮೂಲಕ ಭಾಷೆ ಜೀವಂತವಾಗಿ ಉಳಿಯಲು ಸಾಧ್ಯ ಎಂದರು. ಅರೆ ಭಾಷೆ ಮಾತನಾಡಲು ಹಿಂಜರಿಕೆ ಮಾಡಬಾರದು ಎಂದು ಕಿವಿಮಾತು ಹೇಳಿದ ಗೋಪಾಲ್, ಭಾಷೆಯ ಉಳಿವಿಗಾಗಿ ನಿರಂತರ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದರು.
ಇದೇ ಸಂದರ್ಭ ಸಮುದಾಯದ ಸಾಧಕರಾದ ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕಡ್ಯದ ಅಶೋಕ, ಬೈಮನ ಭೋಜಮ್ಮ ಮತ್ತು ಕರಕರನ ಬೀನಾ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ, ಕುಲಾಲ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಕೆ ಕುಶಾಲಪ್ಪ ಮೂಲ್ಯ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ಜೆ ದೇವದಾಸ್, ಮತ್ತು ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೆ ಎಸ್ ಧೊರೇಶ್ ಅವರುಗಳು ಮಾತನಾಡಿದರು. ಕುಶಾಲನಗರ ಗೌಡ ಸಮಾಜ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಪೊನ್ನಚ್ಚನ ಎಂ ಮೋಹನ್, ಚಂದ್ರಶೇಖರ್ ಪೆರಾಲ, ಕುದುಪಜೆ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಕುಶಾಲನಗರ ಗೌಡ ಸಮಾಜ ಸಂಘ ಸಂಸ್ಥೆಗಳಾದ ಗೌಡ ಯುವಕ ಸಂಘ, ಗೌಡ ಸಾಂಸ್ಕೃತಿಕ ಸಂಘ, ಗೌಡ ಮಹಿಳಾ ಸಂಘ, ಗೌಡ ಮಾಜಿ ಸೈನಿಕರ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಸಾಂಸ್ಕೃತಿಕ ವೇದಿಕೆ ಮತ್ತು ಇತರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು. ಧರಣಿ ಅವರು ಪ್ರಾರ್ಥಿಸಿದರು. ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಸ್ವಾಗತಿಸಿದರು. ಕಲಾ ಆನಂದ್ ಮತ್ತು ರಶಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಲೋಕೇಶ್ ಊರುಬೈಲು ತಂಡದ ಸದಸ್ಯರಿಂದ ‘ಅಪ್ಪ’ ಅರೆ ಭಾಷೆ ನಾಟಕ ಪ್ರದರ್ಶನ ನಡೆಯಿತು.

Follow us on Google News
Share. Facebook Twitter Pinterest LinkedIn Tumblr Email WhatsApp
Previous Article*ಚೆಟ್ಟಳ್ಳಿ ಚೇರಳ ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ : ಅರೆಭಾಷೆ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಲು ಕರೆ*
Next Article *ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯದ ಪಾತ್ರ ಮಹತ್ವ : ಡಾ.ಜಮೀರ್‌ ಅಹಮದ್‌*

*ಕೆ.ನಿಡುಗಣೆ ಗ್ರಾ.ಪಂ.ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಶಾಸಕರ ಸೂಚನೆ*

ಮಾರ್ಚ್ 2, 2026

ಮಡಿಕೇರಿ, NEWS DESK ಮಾ.2:-ಮಡಿಕೇರಿ ತಾಲೂಕಿನ ಕೆ.ನಿಡುಗಣೆಯಲ್ಲಿ ನೂತನ ಗ್ರಾಮ ಪಂಚಾಯತ್ ಕಚೇರಿ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ…

*ಯುದ್ಧ ಪರಿಸ್ಥಿತಿ : HELPLINE ಸಂಖ್ಯೆಗಳು ಇಲ್ಲಿವೆ*

ಮಾರ್ಚ್ 2, 2026

*ಮಾ.03 ರಂದು ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ದೇವಾಲಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಾಸ*

ಮಾರ್ಚ್ 2, 2026

*ಮಾ.06 ರಂದು ಮಿನಿ ಉದ್ಯೋಗ ಮೇಳ*

ಮಾರ್ಚ್ 2, 2026

*ಚೆನ್ನಯ್ಯನಕೋಟೆ ಮತ್ತು ಕಣ್ಣಂಗಾಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ*

ಮಾರ್ಚ್ 2, 2026

*ಮಡಿಕೇರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*

ಮಾರ್ಚ್ 2, 2026

*ಭಾರತಕ್ಕೆ ಮುಟ್ಟಿದ ಯುದ್ಧದ ಬಿಸಿ: ಒಮನ್ ದಾಳಿಯಲ್ಲಿ ಕನ್ನಡಿಗರು ಇದ್ದಾರೆಯೇ? ಮೃತ ಭಾರತೀಯನ ಗುರುತು ಪತ್ತೆಗೆ ವಿದೇಶಾಂಗ ಇಲಾಖೆ ಕಾರ್ಯತತ್ಪರ*

ಮಾರ್ಚ್ 2, 2026

*ಮಿತ್ರ ರಾಷ್ಟ್ರದ ಮೇಲೆ ಮಿತ್ರನಿಂದಲೇ ಅಟ್ಯಾಕ್: ಅಮೆರಿಕದ 3 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಕುವೈತ್; ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು!*

ಮಾರ್ಚ್ 2, 2026

*ಕಾವೇರಿ ನದಿ ಅಳಿದರೆ ಸಂಸ್ಕೃತಿಯೇ ಅಳಿದಂತೆ; ಕಣಿವೆ ಆರತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ*

ಮಾರ್ಚ್ 2, 2026

*”ಕಲೆಯ ಮೂಲಕ ಕಲಿಕೆ” ರೋಟರಿ ಮಡಿಕೇರಿ ವುಡ್ಸ್ ನಿಂದ ವಿಶಿಷ್ಟ ಕಾರ್ಯಕ್ರಮ : ಭಾಷೆ, ಬರಹ ಮತ್ತು ಭಾವನೆಗಳ ಸಮ್ಮಿಲನವೇ ಶಿಕ್ಷಣ : ಯು.ಆರ್.ನಾಗೇಶ್ ಕುಮಾರ್*

ಮಾರ್ಚ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.