
ಮಡಿಕೇರಿ NEWS DESK ಡಿ.19 : ಅಕಾಲಿಕವಾಗಿ ನಿಧನರಾದ ಕಾರ್ಮಿಕರೊಬ್ಬರ ಪತ್ನಿಗೆ ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡಿಂಗ್ ಯೂನಿಯನ್ (ಎಸ್‌ಡಿಟಿಯು) ಸಂಘಟನೆಯು ಕಾರ್ಮಿಕ ಇಲಾಖೆಯಿಂದ ಸಹಾಯಧನವನ್ನು ದೊರಕಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದೆ. ನಗರದ ತ್ಯಾಗರಾಜ ಕಾಲೋನಿಯ ನಿವಾಸಿ ಕಟ್ಟಡ ಕಾರ್ಮಿಕರ ಮಹಮದ್ ಅಲಿ ಅವರು ಕಳೆದ ಒಂದು ವರ್ಷದ ಹಿಂದೆ ಅಕಾಲಿಕವಾಗಿ ನಿಧನಹೊಂದಿದ್ದರು.ಅವರ ಪತ್ನಿ ಅಸೀನ ಅವರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಮೃತ ಪಟ್ಟವರ ಕಟುಂಬಕ್ಕೆ ನಿಡಲಾಗುವ ಸಹಾಯಧನ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆ ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡಿಂಗ್ (ಎಸ್‌ಡಿಟಿ) ಸಂಘಟನೆ ಸಂಬಂಧಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಿ, ಇಲಾಖೆಯ ಸಹಾಯಧನವನ್ನು ತೋಟ ಕಾರ್ಮಿಕರಾದ ಅಸೀನ ಅವರಿಗೆ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದೆ. ಈ ಮಾನವೀಯ ಕಾರ್ಯದಲ್ಲಿ ಸಂಘಟನೆಗೆ ಸಹಕಾರ ನೀಡಿದ ಕಾರ್ಮಿಕ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಹಾಗೂ ಮಡಿಕೇರಿಯ ಕಾರ್ಮಿಕ ನಿರೀಕ್ಷಕರಾದ ಯತ್ನಟ್ಟಿ ಮತ್ತು ಝರೀನಾ, ಕಾರ್ಮಿಕ ಇಲಾಖೆಯ ಎಲ್ಲಾ ಅಧಿಕಾರಿ ವೃಂದ ಹಾಗೂ ಸಿಬ್ಬಂದಿಗಳಿಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ಧನ್ಯವಾದ ಸಲ್ಲಿಸಿದ್ದಾರೆ.








