ಮಡಿಕೇರಿ NEWS DESK ಡಿ.21 : ಕೊಡಗು ಜಿಲ್ಲೆಯ ದೇವರಕೊಲ್ಲಿ ಶ್ರೀಚಾಮುಂಡೇಶ್ವರಿ ದೇವಾಲಯದಿಂದ ಹೊರಟ ಆದಿಯೋಗಿ ರಥ ಇಂದು ಸಂಜೆೆ ಮದೆನಾಡು ತಲುಪಿತು. ದೇವರಕೊಲ್ಲಿ ಸ್ವಯಂಸೇವಕರು ರಥ ಎಳೆಯುವ ಪುಣ್ಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಡಿ.22 ರಂದು ಮದೆನಾಡಿನಿಂದ ಮಡಿಕೇರಿವರೆಗೆ ಕಡಿದಾದ ಬೆಟ್ಟಗುಡ್ಡ ದಾರಿಯಲ್ಲಿ ರಥ ಸಾಗಲಿದೆ. ಸಂಜೆ 5 ಘಂಟೆಯ ನಂತರ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಥವನ್ನು ಬರಮಾಡಿಕೊಂಡು ಮುಖ್ಯಬೀದಿಯಲ್ಲಿ ಭಜನೆಯೊಂದಿಗೆ ಕೊಂಡೊಯ್ಯಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.










