ಮಡಿಕೇರಿ ಡಿ.22 NEWS DESK : ಪ್ರಕೃತಿಯ ಮಡಿಲಿನ ಮರಗೋಡು ಹೊಸ್ಕೇರಿ ಗ್ರಾಮದ ಬೇರಂಗಿ ಬೆಟ್ಟದ ‘ಬಯಲ ಈಶ್ವರ ಸನ್ನಿಧಿ’ಯಲ್ಲಿ ಏಳನೇ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ಸಂಭ್ರಮದಿಂದ ನಡೆಯಿತು. ಮಡಿಕೇರಿ ತಾಲ್ಲೂಕಿನ ಮರಗೋಡು ಸಮೀಪದ ಬೇರಂಗಿ ಬೆಟ್ಟದ ಬಯಲ ಈಶ್ವರ ಸನ್ನಿಧಿಯಲ್ಲಿ ಉತ್ಸವದ ಅಂಗವಾಗಿ, ವಿಶಾಲ ವೃಕ್ಷದ ಬುಡದಲ್ಲಿರುವ ದೇವರ ವಿಗ್ರಹವನ್ನು ವಿವಿಧ ವರ್ಣದ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ, ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಉತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಅನ್ನದಾನವು ಇದೇ ಸಂದರ್ಭ ನಡೆಯಿತು. ಉತ್ಸವದ ನೇತೃತ್ವ ವಹಿಸಿದ್ದ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎಂ.ರಾಮಣ್ಣ ಒಳಗೊಂಡಂತೆ, ಮಣಿ , ಶೇಷಪ್ಪ, ದಿನೇಶ್, ಪಾಪು, ಸುಹಾಸ್ ಸೇರಿದಂತೆ ಹಲ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.











