ಮಡಿಕೇರಿ ಡಿ.22 NEWS DESK : ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಕೊಯಂಬತ್ತೂರಿನ ಈಶಾ ಕೇಂದ್ರ್ರದ ವತಿಯಿಂದ ಕೃಷ್ಣನ ನಗರಿ ಉಡುಪಿಯಿಂದ ಆರಂಭಗೊಂಡ ‘ಆದಿ ಯೋಗಿ ರಥ ಯಾತ್ರೆ’ ಸೋಮವಾರ ಸಂಜೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯನ್ನು ಪ್ರವೇಶಿಸಿತು. ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ ಮಾರ್ಗವನ್ನು ಹಾದು ಇಂದು ಸಂಜೆ ನಗರದ ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ರಥ ಯಾತ್ರೆ ನಗರವನ್ನು ಪ್ರವೇಶಿಸಿತು.ಈ ಸಂದರ್ಭ ಯಾತ್ರೆಯನ್ನು ಭಕ್ತಿ ಭಾವದಿಂದ ಎದುರ್ಗೊಂಡ ಭಕ್ತಾದಿಗಳು, ತಾವು ಕೈ ಜೋಡಿಸುವ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ರಥ ಯಾತ್ರೆ ಸಂಭ್ರಮದಿಂದ ನಡೆಯಿತು. ರಥ ಯಾತ್ರೆ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತ, ಕೋಟೆ, ಮಹದೇವಪೇಟೆಯನ್ನು ಹಾದು ಚೌಕಿ ಮೂಲಕ ಸೋಮವಾರಪೇಟೆ ರಸ್ತೆಯಲ್ಲಿರುವ ಕಾಶೀಮಠವನ್ನು ತಲುಪಿತು. ಮಂಗಳವಾರದಂದು ಸುಂಟಿಕೊಪ್ಪದತ್ತ ತೆರಳಲಿದೆ. ರಥವು ‘ಆದಿ ಯೋಗಿ’ಯ ಮೂರ್ತಿ, ಸದ್ಗುರುಗಳ ಪಾದುಕೆಯನ್ನು ಹೊಂದಿದ್ದು, ಮರದಿಂದ ನಿರ್ಮಿತ ರಥ ಸುಮಾರು 3 ಟನ್ ಭಾರವನ್ನು ಹೊಂದಿದೆ. ಈ ಸಂದರ್ಭ ಈಶಾ ಯೋಗ ಕೇಂದ್ರ್ರದ ಸ್ವಯಂ ಸೇವಕರಾದ ಧನಂಜಯ್, ಜೆ.ಗಣೇಶ್ ಶೆಣೈ, ಅಗಸ್ತ್ಯ ಮಧುಕರ್, ಅಖಿಲ ನಾಗರಾಜ್, ರಂಜಿತ್ ಜಯರಾಂ ಸೇರಿದಂತೆ ಹಲ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.










