

ಕುಶಾನಲಗರ NEWS DESK ಡಿ.24 : ಕುಶಾಲನಗರದ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಬಳಿ ಮಂಗಳವಾರ ಬೆಳಗ್ಗೆ ವಾಹನವೊಂದು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮುಗ್ಧ ಆಕಳು (ಪುಟ್ಟ ಕರು) ಗಂಭೀರ ಗಾಯಗೊಂಡಿತ್ತು. ಅಂದರೆ ವೇಗದಲ್ಲಿ ಬಂದ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕರುವಿನ ಕಣ್ಣ ಕೆಳಗೆ ಬಲವಾದ ಪೆಟ್ಟು ಬಿದ್ದು ಎರಡು ಮೂರು ಇಂಚಿನಷ್ಟು ತೂತು ಬಿದ್ದಿತ್ತು. ಕೊಂಬಿನ ಭಾಗವೂ ಘಾಸಿಯಾಗಿತ್ತು. ಹಾಗಾಗಿ ತೀವ್ರತರಹದ ರಕ್ತ ಸ್ರಾವ ವಾಗಿತ್ತು. ಅತ್ತ ತನ್ನ ಕರುಳ ಬಳ್ಳಿಗಾಗಿ ಅಂದರೆ ತನ್ನ ಕರುವಿಗಾಗಿ ಹುಡುಕಾಡುತ್ತಿದ್ದ ತಾಯಿ ಹಸುವಿಗೆ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ನಿತ್ರಾಣಗೊಂಡಿದ್ದ ಕರುವಿನ ದರ್ಶನವಾದೊಡನೆಯೇ, ಅಯ್ಯೋ ಕಂದಾ ಏನಾಯಿತು ನಿನಗೆ…? ನಿನ್ನ ಈ ಸ್ಥಿತಿಗೆ ಕಾರಣರಾರು ? ಎಂದು ಘೀಳಿಟ್ಟು ಗೋಳಾಡಿದ ಹೆತ್ತ ಕರುಳು ರಕ್ತ ಸ್ರಾವದಿಂದ ಒದ್ದೆಯಾಗಿದ್ದ ಕಂದಮ್ಮನ ಹಣೆ, ಮುಖ, ಹೊಟ್ಟೆ ಎಲ್ಲವನ್ನು ತನ್ನ ನಾಲಿಗೆಯಿಂದ ಸಾವರಿಸಿ ಕಂದಮ್ಮನು ಅನಭವಿಸುತ್ತಿದ್ದ ನೋವು ನುಂಗಲು ಹರಸಾಹಸ ಪಟ್ಟಿತು. ಮನುಷ್ಯರಂತೆಯೇ ಕಂದಮ್ಮನ ಸ್ಥಿತಿಗೆ ಪರದಾಡಿ ಮನದಲ್ಲೇ ವ್ಯಥೆ ಪಟ್ಟು ತುಂಬಿ ಹೋಗಿದ್ದ ಕಣ್ಣಾಲಿಗಳನ್ನು ಕಂಡ ಸ್ಥಳೀಯರ ಕಂಗಳು ಅರೆ ಕ್ಷಣ ಒದ್ದೆಯಾಗಿದ್ದವು. ಮಾತು ಬಾರದ ಮುಗ್ಧ ಹಾಗೂ ಅಮಾಯಕ ಈ ಪ್ರಾಣಿಗಳಲ್ಲೂ ಅವ್ಯಾಹತವಾದ ಅನುಬಂಧವಿದೆ. ಯಾರಿಗೂ ಗೋಚರಿಸದ ಪ್ರೇಮವಿದೆ. ಅಶರೀರವಾಣಿ ಈ ಮುಗ್ಧ ಜೀವಿಗಳನ್ನು ಕೂಗಿ ಕರೆಯುತ್ತದೆ ಎಂಬುದಕ್ಕೆ ಇಂತಹ ಅಪರೂಪದ ಸಂಗತಿಗಳು ಸಾಕ್ಷಿಯಾಗಬಲ್ಲವು. ಮನುಷ್ಯರಾದರೆ ಕರೆ ಮಾಡಿ ಹೀಗಾಗಿದೆ ನಿಮ್ಮವರಿಗೆ ಬಂದು ನೋಡಿ ಎಂದು ಹೇಳಬಹುದು. ಆದರೆ ಎಲ್ಲೋ ಇದ್ದ ಈ ತಾಯಿ ಹಸುವಿಗೆ ತನ್ನ ಕಂದಮ್ಮನ ಇಂತಹ ದುರ್ಗತಿ ತಿಳಿದದ್ದಾದರೂ ಹೇಗೆ ? ಹೇಳಿದ್ದಾದರೂ ಯಾರೂ ? ಆ ಹೆತ್ತ ಜೀವವೇ ಹುಡುಕಿ ಬಂದು ತನ್ನ ಕಂದನ ಸ್ಥಿತಿ ಕಂಡು ಕಣ್ಣೀರಿಡುವುದನ್ನು ಖುದ್ದು ಕಂಡವರ ಕಣ್ಣಾಲಿಗಳು ತೇವ ಆಗದಿರದೇ….! *ಗೋವು ಅಂತಾ ಅಂದರೆ ಚತುರ್ದಶ ಭುವನ ಪ್ರತೀ* ಗೋವಿನ ಮುಖದಲ್ಲಿ ಬ್ರಹ್ಮನನ್ನು, ಕಣ್ಣುಗಳಲ್ಲಿ ವಿಷ್ಣುವನ್ನು, ಕಂಠದಲ್ಲಿ ರುದ್ರನನ್ನು, ಕೊಂಬುಗಳಲ್ಲಿ ಸೂರ್ಯ ಚಂದ್ರರನ್ನು, ನಾಲ್ಕು ಕಾಲುಗಳಲ್ಲಿ ನಾಲ್ಕು ವೇದಗಳನ್ನು, ನಾಲ್ಕು ಕಾಲುಗಳ ಎಂಟು ಗೊರಸುಗಳಲ್ಲಿ ಅಷ್ಟ ದಿಗ್ಪತಿಗಳನ್ನು, ಬಾಲದಲ್ಲಿ ಸರ್ಪ ರೂಪವನ್ನು, ಕೆಚ್ಚಲಿನಲ್ಲಿ ಅಮೃತವನ್ನು, ರೋಮಗಳಲ್ಲಿ ಕೋಟಿ ಕೋಟಿ ದೇವತೆಗಳನ್ನು ಕಂಡ ದೇಶ ನಮ್ಮದು. ಮನುಷ್ಯರಾದ ನಾವೆಲ್ಲರೂ ಹುಟ್ಟಿದ ಕೇವಲ ಒಂದು ಅಥವಾ ಎರಡು ವರ್ಷ ಮಾತ್ರ ಹೆತ್ತ ತಾಯಿಯ ಎದೆಯ ಅಮೃತವನ್ನು ಕುಡಿಯುತ್ತೇವೆ. ಇನ್ನು ಜೀವನವಿಡೀ ಈ ಗೋವಿನ ಹಾಲನ್ನೇ ಕುಡಿಯುತ್ತೇವೆ. ಇಂತಹ ಗೋ ಮಾತೆಯನ್ನು ನಾವೆಲ್ಲರೂ ರಕ್ಷಿಸೋಣ. ಇಂತಹ ನೋವುಂಡ ಗೋ ಮಾತೆಗೆ ಸಕಾಲದಲ್ಲಿ ನೆರವಾದ ಕುಶಾಲನಗರದ ಹೋಟೆಲ್ ಉದ್ಯಮಿ ಕಿಂಗ್ಸ್ ವೇ ದಾವುದ್ ಹಾಗೂ ತಂಡ ಪುರಸಭೆಯ ಕಾಯಕಯೋಗಿಗಳು ಹಾಗೂ ಸಕಾಲದಲ್ಲಿ ಚಿಕಿತ್ಸೆ ನೀಡಿದ ಪಶು ವೈದ್ಯರಾದ ಡಾ.ಸಂಜೀವ್ ಕುಮಾರ್ ಸಿಂಧೆ ಮತ್ತು ಸಿಬ್ಬಂದಿಗಳಿಗೊಂದು ಸಲಾಂ…. ಹೇಳಲೇ ಬೇಕಲ್ವಾ. *ವರದಿ : ಕೆ.ಎಸ್.ಮೂರ್ತಿ* *ಕುಶಾಲನಗರ* *9448896395*











