Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಎಸ್‌ಡಿಪಿಐ ಕೊಡಗು ಜಿಲ್ಲಾ ಪ್ರತಿನಿಧಿ ಸಭೆ : ಪ್ರಮುಖ ನಿರ್ಣಯಗಳ ಮಂಡನೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ*
  • *ಸಂತ ಜೊಸೆಫರ ಶಾಲೆಯಲ್ಲಿ ಸುರಕ್ಷತಾ ಕಾರ್ಯಕ್ರಮ*
  • *ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಜಿ.ಹಂಸ ಸಾಧನೆ*
  • *ವಿಶೇಷ ಚೇತನರಿಂದ ಅರ್ಜಿ ಆಹ್ವಾನ*
  • *ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ*
  • *ಪಟ್ಟಣಕ್ಕೆ ಬಂದ ಕಾಡು ಕುರಿ*
  • *ಪ್ರಜಾಪ್ರಭುತ್ವ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಂದು ಮತ ಅಮೂಲ್ಯ : ಶಾಸಕ ಎ.ಎಸ್.ಪೊನ್ನಣ್ಣ*
  • *ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ*
  • *ಗಾಜಿನ ಸೇತುವೆ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ : ಪ್ರವಾಸಿಗರ ಸುರಕ್ಷತೆ ಗಮನಹರಿಸಿ ಮುಂದಿನ ಕ್ರಮ* 
  • *’ಕರ್ತವ್ಯ’ ಆಪ್ ನೋಂದಣಿ : ಮಾಧ್ಯಮ ವರದಿಗಳಿಗೆ ಸ್ಪಷ್ಟೀಕರಣ ನೀಡಿದ ಸರ್ಕಾರ :  ಶೇ.70.6 ರಷ್ಟು ಪ್ರಗತಿ ಸಾಧನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಜೆರ್ಸಿ ವಿತರಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಜೆರ್ಸಿ ವಿತರಣೆ*

ಡಿಸೆಂಬರ್ 25, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
oplus_0
Facebook Twitter WhatsApp Email Telegram Copy Link


ವಿರಾಜಪೇಟೆ ಡಿ.25 NEWS DESK : ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಸಹಕಾರ ನೀಡುವುದಾಗಿ ದಾನಿಗಳು ಹಾಗೂ ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಎಸ್ ಪೂಣಚ್ಚ ಭರವಸೆ ನೀಡಿದರು. ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಟಿ ಶರ್ಟ್ ಹಾಗೂ ಜೆರ್ಸಿ ವಿತರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ತನಗೆ ವಿದ್ಯೆ ನೀಡಿದ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ತನ್ನಿಂದ ಆದ ಸಹಾಯವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಸಾಧ್ಯವಾದಷ್ಟು ನೆರವು ನೀಡುತ್ತೇನೆ. ಇಲ್ಲಿಂದ ವಿದ್ಯೆ ಪಡೆದ 30 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಆಗಿ ನಿರ್ವಋತ್ತಿಗೊಂಡಿದ್ದೇನೆ. ಇದು ನನ್ನ ಮೈಲಿಗಲ್ಲು. ಸಮಾಜಕ್ಕೆ ನಾವು ಏನಾದರೊಂದು ಕೊಡುಗೆ ನೀಡಬೇಕು. ಇಲ್ಲಿನ ವಿದ್ಯಾರ್ಥಿಗಳು ಕೂಡ ಉನ್ನತ ವಿದ್ಯಾಭ್ಯಾಸ ಪಡೆದು ಸೇನೆಗೆ ಸೇರುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ, ವಿರಾಜಪೇಟೆ ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಮಾತನಾಡಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾನಿಗಳ ಸಹಕಾರ ಅವಶ್ಯ. ಶಾಲೆಯಲ್ಲಿ ಕಲಿತು ಉನ್ನತ ಸ್ಥಾನದಲ್ಲಿರುವ ಹಳೇ ವಿದ್ಯಾರ್ಥಿಗಳು ಕಲಿತ ಶಾಲೆಗೆ ಕೈಲಾದ ಸಹಾಯ ಮಾಡಬೇಕು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಅನೇಕ ಹುದ್ದೆಗಳನ್ನು ಅಲಂಕರಿಸಿ ಕೀರ್ತಿ ತಂದಿದ್ದಾರೆ. ಅಂತಹದೇ ಸಾಲಿನಲ್ಲಿ ದಾನಿಗಳು ಹಾಗೂ ನಿವೃತ್ತ ಮಾಜಿ ಸೈನಿಕ ಕ್ಯಾಪ್ಟನ್ ಪೂಣಚ್ಚ ಸೇರಿದ್ದಾರೆ. ಇವರು ಎಲೆಮರೆಯ ಕಾಯಿಯ ಹಾಗೆ ಸಮಾಜ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ತಾನು ಕಲಿತ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ಹಂಬಲದಿಂದ ತಮ್ಮ ಕೈಲಾದ ಸೇವೆಯನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸೇವೆ ಇನ್ನಷ್ಟು ಮುಂದುವರೆಯಲಿ ಎಂದು ಹಾರೈಸುವುದಾಗಿ ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ಚೆಯ್ಯಂಡ ಲೀಲಾವತಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಅದರೊಂದಿಗೆ ದಾನಿಗಳು ನೆರವು ನೀಡಿದ್ದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ. ಈ ಹಿಂದೆ ದಾನಿಗಳಾದ ಕ್ಯಾಪ್ಟನ್ ಪೂಣಚ್ಚ ಅವರು ನೀಡಿದ ಭರವಸೆಯಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಜರ್ಸಿ ಹಾಗೂ ಟಿಶರ್ಟ್ ವಿತರಿಸಿ ನೆರವು ನೀಡಿದ್ದಾರೆ. ಇವರ ಸೇವೆ ಅನುಕರಣೀಯ. ಇವರು ಈ ಶಾಲೆಯ ಮೇಲಿಟ್ಟಿರುವ ಅಭಿಮಾನಕ್ಕೆ ಬೆಲೆಕಟ್ಟಲಾಗದು ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಬೇಪಡಿಯಂಡ ವಿಲೀನ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಿಗಳು ಪ್ರೋತ್ಸಾಹದಾಯಕ ಕೊಡುಗೆ ನೀಡಿದರೆ ಮಕ್ಕಳ ಉತ್ತಮ ಕಲಿಕೆಗೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ, ದಾನಿಗಳು ಆದ, ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಪೂಣಚ್ಚ ತನಗೆ ವಿದ್ಯೆ ನೀಡಿದ ಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಟಿ ಶರ್ಟ್ ಹಾಗೂ ಜೆರ್ಸಿ ವಿತರಿಸಿ ಇಂದು ಮಾನವೀಯತೆ ಮೆರೆದಿದ್ದಾರೆ. ಇದು ಶ್ಲಾಘನೀಯ. ಉತ್ತಮ ಬೋಧನೆ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಸರಕಾರಿ ಶಾಲೆಗಳನ್ನು ಉಳಿಸಬೇಕು. ಪ್ರೋಷಕರು, ಶಿಕ್ಷಕರು ಶಾಲೆ ಪ್ರಗತಿ ಕುರಿತು ಕಾಳಜಿ ತೋರಿಸಬೇಕು. ಮಕ್ಕಳಲ್ಲಿರುವ ಕಲಿಕೆಯ ಆಸಕ್ತಿ ಗಮನಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಲಿಕೆಯ ಮಹತ್ವ ತಿಳಿಸಿಕೊಡಬೇಕು ಎಂದರು. ವೇದಿಕೆಯಲ್ಲಿ ನಿವೃತ್ತ ಕ್ಯಾಪ್ಟನ್ ಬಾಚುರ ಪೂಣಚ್ಚ ಅವರ ತಾಯಿ ಬಾಚುರ ಕಾಮವ್ವ, ಸ್ಥಳಿಯ ಕಾಫಿ ಬೆಳೆಗಾರರು, ಸಮಾಜ ಸೇವಕರು ಆದ ಪಟ್ರಪಂಡ ಸುರೇಶ್ ಬೆಳ್ಯಪ್ಪ, ಸ್ಥಳದಾನಿಗಳು, ಶಾಲೆಯ ಸಲಹಾ ಸಮಿತಿ ಸದಸ್ಯರಾದ ಬಿದ್ದೇರಿಯಂಡ ದೇವಯ್ಯ ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ನಿವೃತ್ತ ಕ್ಯಾಪ್ಟನ್ ಬಾಚುರ ಪೂಣಚ್ಚ ಹಾಗೂ ಬಾಚುರ ಕಾಮವ್ವ ಅವರು ಟಿ ಶರ್ಟ್ ಹಾಗೂ ಜರ್ಸಿ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ಅತಿಥಿ ಶಿಕ್ಷಕಿ ಫಸಿಲಾ, ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಎಸ್‌ಡಿಪಿಐ ಕೊಡಗು ಜಿಲ್ಲಾ ಪ್ರತಿನಿಧಿ ಸಭೆ : ಪ್ರಮುಖ ನಿರ್ಣಯಗಳ ಮಂಡನೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ*

ಜೂನ್ 19, 2026

*ಸಂತ ಜೊಸೆಫರ ಶಾಲೆಯಲ್ಲಿ ಸುರಕ್ಷತಾ ಕಾರ್ಯಕ್ರಮ*

ಜೂನ್ 18, 2026

*ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಜಿ.ಹಂಸ ಸಾಧನೆ*

ಜೂನ್ 18, 2026

*ಸಂತ ಜೊಸೆಫರ ಶಾಲೆಯಲ್ಲಿ ಸುರಕ್ಷತಾ ಕಾರ್ಯಕ್ರಮ*

ಜೂನ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜೂ.18 NEWS DESK : ನಗರದ ಸಂತ ಜೊಸೆಫರ ಶಾಲೆಯಲ್ಲಿ ಡಿಡಿಎಂಎ ಮತ್ತು ಎನ್‍ಡಿಆರ್‍ಎಫ್ ತಂಡದಿಂದ ಶಾಲಾ ಸುರಕ್ಷತಾ…

*ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಜಿ.ಹಂಸ ಸಾಧನೆ*

ಜೂನ್ 18, 2026

*ವಿಶೇಷ ಚೇತನರಿಂದ ಅರ್ಜಿ ಆಹ್ವಾನ*

ಜೂನ್ 18, 2026

*ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ*

ಜೂನ್ 18, 2026

*ಪಟ್ಟಣಕ್ಕೆ ಬಂದ ಕಾಡು ಕುರಿ*

ಜೂನ್ 18, 2026

*ಪ್ರಜಾಪ್ರಭುತ್ವ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಂದು ಮತ ಅಮೂಲ್ಯ : ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 18, 2026

*ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ*

ಜೂನ್ 18, 2026

*ಗಾಜಿನ ಸೇತುವೆ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ : ಪ್ರವಾಸಿಗರ ಸುರಕ್ಷತೆ ಗಮನಹರಿಸಿ ಮುಂದಿನ ಕ್ರಮ* 

ಜೂನ್ 18, 2026

*’ಕರ್ತವ್ಯ’ ಆಪ್ ನೋಂದಣಿ : ಮಾಧ್ಯಮ ವರದಿಗಳಿಗೆ ಸ್ಪಷ್ಟೀಕರಣ ನೀಡಿದ ಸರ್ಕಾರ :  ಶೇ.70.6 ರಷ್ಟು ಪ್ರಗತಿ ಸಾಧನೆ*

ಜೂನ್ 18, 2026

*ಕೊಡವರಿಗೆ ವಿಶೇಷ ಸ್ಥಾನಮಾನ : ಸಿಎನ್‌ಸಿಯಿಂದ ಜೂ.26ರಂದು ವಿಚಾರಗೋಷ್ಠಿ*

ಜೂನ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.