ವಿರಾಜಪೇಟೆ ಡಿ.27 NEWS DESK : ಮಲೆತಿರಿಕೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಶ್ರಿ ಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಪೂಜಾ ಮಹೋತವವು ಜ.1ರ ವರೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ. ಈಗಾಗಲೇ ವಾರ್ಷಿಕ ಪೂಜಾ ಮಹೋತವವು ಆರಂಭಗೊಂಡಿದ್ದು, ಕ್ಷೇತ್ರ ಪಾಲಕ ಗುಳಿಗನ ಪೂಜೆ ಶ್ರದ್ಧಾ ಭಕ್ತಿಗಳಿಂದ ನಡೆಯಿತು. ಇಂದು ಸಂಜೆ (ಡಿ.27) ವರದ ವಿನಾಯಕ ಸೇವಾ ಸಮಿತಿ ವತಿಯಿಂದ ಮಂಡಲ ಪೂಜೆ ನಡೆಯಲಿದೆ. ಜ.1 ರಂದು ಪ್ರಾಥ:ಕಾಲ 5.30 ಗಂಟೆಗೆ ಗಣಪತಿ ಹೋಮ, ಲಕ್ಷ್ಮಿ ಪೂಜೆ, ಸರಸ್ವತಿ ಪೂಜೆ ಜರುಗಲಿದೆ. 10 ಗಂಟೆಗೆ ಲಕ್ಷಾರ್ಚನೆ ನಡೆಯಲಿದೆ. ಮಾಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ದೇವಾಲಯದ ಪುನರ್ ಪ್ರತಿಷ್ಠಾನ ಕಾರ್ಯಕ್ರಮ ನಡೆಯಲಿರುವುದರಿಂದ ಉತ್ಸವ ಅಂಗವಾಗಿ ನಡೆಯಲಿರುವ ಶೋಭಯಾತ್ರೆ ರದ್ದುಗೊಳಿಸಲಾಗಿದ್ದು ಆಲಯದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮನವಿ ಮಾಡಿದೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ










