
ಪುತ್ತೂರು ಜ.1 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು (ಓಚಿಣioಟಿಚಿಟ ಃoಚಿಡಿಜ oಜಿ ಂಛಿಛಿಡಿeಜiಣಚಿಣioಟಿ) ಮೂರು ಶೈಕ್ಷಣಿಕ ವರ್ಷಗಳಿಗೆ ಮಾನ್ಯತೆಯನ್ನು ನೀಡಿದೆ. ಈ ಹಿಂದೆ 2019 ರಿಂದ 2022 ಹಾಗೂ 2022 ರಿಂದ 2025 ವರೆಗೆ ಎರಡು ಬಾರಿ ರಾಷ್ಟ್ರೀಯ ಮಾನ್ಯತೆ ದೊರಕಿತ್ತು, ಈಗ ಮತ್ತೆ ಮೂರು ವರ್ಷಗಳ ಕಾಲಕ್ಕೆ ಅಂದರೆ ಜನವರಿ 2026 ರಿಂದ ಡಿಸೆಂಬರ್ 2028ರ ವರೆಗೆ ಮಾನ್ಯತೆಯನ್ನು ನೀಡಲಾಗಿದೆ. ರಾಷ್ಟ್ರೀಯ ಮಾನ್ಯತಾ ಮಂಡಳಿಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಂIಅಖಿಇ) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಂIಅಖಿಇ) ನಿಗದಿಪಡಿಸಿದ ರೀತಿಯಲ್ಲಿ ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳು, ಪಾಠ ಪ್ರವಚನಗಳು, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಕ್ರೀಡಾ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ಯಾಂಪಸ್ ನೇಮಕಾತಿ, ಕ್ಯಾಂಟೀನ್ ಸೌಲಭ್ಯ, ಹಾಸ್ಟೆಲ್ ಇವೇ ಮುಂತಾದ ಹತ್ತು ಹಲವು ಸೌಲಭ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಈ ಮಾನ್ಯತೆಯನ್ನು ನೀಡಲಾಗಿz.É ವಿವಿಧ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳ ಐದು ಮಂದಿ ತಜ್ಞರನ್ನೊಳಗೊಂಡ ರಾಷ್ಟ್ರೀಯ ಮಾನ್ಯತಾ ಮಂಡಳಿಯ ತಂಡವು ನವೆಂಬರ್ 28 ರಿಂದ 30ರ ವರೆಗೆ 3 ದಿನಗಳ ಕಾಲ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮೂರು ವರ್ಷಗಳ ಅವಧಿಗೆ ಮಾನ್ಯತೆಯನ್ನು ನೀಡಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗಗಳಿಗೂ ಮಾನ್ಯತೆ ಇದ್ದು, ಕಾಲೇಜಿನ ಆರು ವಿಭಾಗಗಳ ಪೈಕಿ ನಾಲ್ಕು ವಿಭಾಗಗಳು ಮಾನ್ಯತೆಯನ್ನು ಗಳಿಸಿಕೊಂಡಿವೆÉ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.











