ಮಡಿಕೇರಿ NEWS DESK ಜ.2 : ಮೈಸೂರು ಕಾಫಿ ಸಂಸ್ಕರಣ ಸಂಘದ ನಿಯೋಗ ಸಂಘದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘಕ್ಕೆ 3 ಎಕರೆ 34 ಗುಂಟೆ ಜಮೀನು ಹಾಗೂ ರೂ.3 ಕೋಟಿ ಅನುದಾನ ನೀಡಬೇಕೆಂದು ಪ್ರಮುಖರು ಕೋರಿಕೊಂಡರು. ಸಂಘದ ಉಪಾಧ್ಯಕ್ಷ ಪ್ರಭು ಕುಮಾರ್ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.










