
ನಾಪೋಕ್ಲು ಜ.5 NEWS DESK : ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುಟಾಣಿ ವಿಜ್ಞಾನ ಬಳಗದ ವತಿಯಿಂದ ಅಂತಾರಾಷ್ಟ್ರೀಯ ಗಣಿತ ಪ್ರತಿಭಾ ಪರೀಕ್ಷೆಯನ್ನು ಆಯೋಜಿಸಲಾಯಿತು. ಪರೀಕ್ಷೆಯಲ್ಲಿ ಶ್ರೀ ರಾಜರಾಜೇಶ್ವರಿ ಶಾಲೆಯ ಪ್ರೌಢಶಾಲಾ ವಿಭಾಗದಿಂದ ಒಟ್ಟು 50 ವಿದ್ಯಾರ್ಥಿಗಳು ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿತ್ತಾರೆ. ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಜಿಶ್ಮಿತಾ ಬಿ.ಜಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ, 8ನೇ ತರಗತಿ ವಿದ್ಯಾರ್ಥಿನಿ ಹಾಸಿನಿ ಸಿ.ವಿ ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ 9ನೇ ತರಗತಿ ವಿದ್ಯಾರ್ಥಿ ತ್ರಿಶೂಲ್ ತಿಮ್ಮಯ್ಯ ಬಿ.ಹೆಚ್ ರಾಷ್ಟ್ರಮಟ್ಟದಲ್ಲಿ ಐದನೇ ಸ್ಥಾನ, 8ನೇ ತರಗತಿ ವಿದ್ಯಾರ್ಥಿನಿ ದಕ್ಷ ಎಂ.ಆರ್ ಜಿಲ್ಲಾಮಟ್ಟದಲ್ಲಿ ನಾಲ್ಕನೇ ಸ್ಥಾನ, 10ನೇ ತರಗತಿ ವಿದ್ಯಾರ್ಥಿನಿ ನೀಮ ಎಂ.ಪಿ ಜಿಲ್ಲಾ ಮಟ್ಟದಲ್ಲಿ 5ನೇ ಸ್ಥಾನ, 8ನೇ ತರಗತಿ ವಿದ್ಯಾರ್ಥಿನಿ ಖುಷಿ ಡಿ.ಸಿ ತಾಲೂಕುಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ ಪ್ರೇಕ್ಷ ಪೊನ್ನಮ್ಮ ಕೆ.ಆರ್ ತಾಲೂಕು ಮಟ್ಟದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ. ಶಾಲೆಯ ಗಣಿತ ಶಿಕ್ಷಕರಾಗಿರುವ ಅನಿಲ್ ಯು.ಎಂ, ಬೃಂದಾಕವನ್ ಕುದುಪಜೆ ರಾಜೇಶ್ವರಿ ಡಿ.ಎಂ, ಶಾಲೆಯ ಮುಖ್ಯ ಶಿಕ್ಷಕರಾದ ಕವನ್ ಕುದುಪಜೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸ್ವರೂಪ್ ಕೆ.ಬಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ವರದಿ : ದುಗ್ಗಳ ಸದಾನಂದ.









